ಎಎಸ್ಪಿ ಹರ್ಷ ಪ್ರಿಯಂವದರಿಗೆ ಮುಂಬಡ್ತಿ
Update: 2025-12-31 22:15 IST
ಉಡುಪಿ, ಡಿ.31: ಕಳೆದ ಫೆಬ್ರವರಿ ತಿಂಗಳಿನಿಂದ ಕಾರ್ಕಳ ಉಪ ವಿಭಾಗದ ಎಎಸ್ಪಿಯಾಗಿದ್ದ ಕಾರ್ಯ ನಿರ್ವಹಿಸುತಿದ್ದ ಡಾ. ಹರ್ಷ ಪ್ರಿಯಂವದ ಅವರಿಗೆ ರಾಜ್ಯ ಸರಕಾರ ಸಿಐಡಿ ಎಸ್ಪಿಯಾಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.
ಜಾರ್ಖಂಡ್ ಮೂಲದ ಹರ್ಷ ಪ್ರಿಯಂವದ, 2020ರ ಯುಪಿಎಸ್ಸಿ ಪರೀಕ್ಷೆಯಲ್ಲಿ 165ನೇ ರ್ಯಾಂಕ್ ಪಡೆದಿದ್ದು, ಐಪಿಎಸ್‌ನ್ನು ಆಯ್ಕೆ ಮಾಡಿದ್ದರು. ಎಂಬಿಬಿಎಸ್ ಪದವೀಧರೆಯಾಗಿರುವ ಹರ್ಷ ಪ್ರಿಯಂವದ, ಅವರನ್ನು 2025ರ ಫೆಬ್ರವರಿಯಲ್ಲಿ ಕಾರ್ಕಳ ಉಪ ವಿಭಾಗದ ಎಎಸ್ಪಿಯಾಗಿ ಸರಕಾರ ನೇಮಿಸಿತ್ತು. ದಕ್ಷ ಹಾಗೂ ಚುರುಕಿನ ಐಪಿಎಸ್ ಅಧಿಕಾರಿಯಾಗಿ ಡಾ.ಹರ್ಷ ಅವರು ಜಿಲ್ಲೆಯಲ್ಲಿ ಹಲವು ಜಟಿಲ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸು ವಲ್ಲಿ ಯಶಸ್ವಿಯಾಗಿದ್ದರು. ಇದೀಗ ಅವರು ಸಿಐಡಿ ಎಸ್ಪಿ ಆಗಿ ನೇಮಕಗೊಂಡಿದ್ದಾರೆ.