×
Ad

ʼಆಯುಷ್ ಹಬ್ಬʼ ಜನಜಾಗೃತಿ ಅಭಿಯಾನಕ್ಕೆ ಚಾಲನೆ

Update: 2026-01-05 17:37 IST

ಉಡುಪಿ, ಜ.5: ಮಂಗಳೂರು ನಗರದ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜ.31 ಮತ್ತು ಫೆ.1ರಂದು ಜರಗಲಿರುವ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ- ಆಯುಷ್ ಹಬ್ಬದ ಜನಜಾಗೃತಿ ಅಭಿಯಾನಕ್ಕೆ ಉಡುಪಿಯಲ್ಲಿ ರವಿವಾರ ಚಾಲನೆ ನೀಡಲಾಯಿತು.

ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಆಯುಷ್ ವೃತ್ತಿನಿರತ ವೈದ್ಯರ ಉಪಸ್ಥಿತಿ ಯಲ್ಲಿ ಜರಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಎ.ಎಫ್.ಐ ಅಧ್ಯಕ್ಷ ಮತ್ತು ಆಯುಷ್ ಹಬ್ಬದ ಸಂಯೋಜಕ ಡಾ.ಎನ್.ಟಿ.ಅಂಚನ್ ಪಡುಬಿದ್ರಿ ವಹಿಸಿದ್ದರು.

ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷ ಡಾ.ಆಶಾ ಜ್ಯೋತಿ ರೈ ಮಾಲಾಡಿ ಮಾತನಾಡಿ, ಈ ಕಾರ್ಯಕ್ರಮವು ಸಂಪದ್ಭರಿತವಾದ ಆಯುಷ್ ವೈದ್ಯ ಪದ್ಧತಿಗಳ ಪ್ರಯೋಜನ ಎಲ್ಲಾ ವರ್ಗದ ಜನರಿಗೆ ತಲಪಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

ಆಯುಷ್ ಹಬ್ಬದ ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ, ಆಯುಷ್ ಹಬ್ಬದಲ್ಲಿರುವ ವಿವಿಧ ವೈಶಿಷ್ಟ್ಯಗಳ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಗಳ ಎಲ್ಲಾ ಆಯುಷ್ ಕಾಲೇಜುಗಳು ಭಾಗವಹಿಸಲಿದ್ದು ಆಯುಷ್ ಪದ್ಧತಿಗಳ ಉನ್ನತ ಮಟ್ಟದ ಚಿಕಿತ್ಸಾ ವಿಧಾನಗಳ ಪರಿಚಯ ಹಾಗೂ ನೂತನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಅಳವಡಿಸಿ ಜನರ ಆರೋಗ್ಯ ಸೇವೆಯನ್ನು ಉನ್ನತೀಕರಣಗೊಳಿಸಬಲ್ಲ ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.

ಇದರಲ್ಲಿ ಆರೋಗ್ಯಪೂರ್ಣ ಹೃದಯಕ್ಕಾಗಿ ಆಯುಷ್, ಮಹಿಳಾ ಹಬ್ಬ, ಸಾವಯವ ಸಂತೆಯಲ್ಲಿ ಸುಮಾರು 70 ಮಳಿಗೆಗಳು ರಾಸಾಯನಿಕ ರಹಿತ ಆಹಾರ ಪದ್ಧತಿಗಳ ಮಾಹಿತಿ, ಮಾರಾಟ ಲಭ್ಯವಾಗಲಿದೆ. 50 ಪ್ರದರ್ಶನ ಮಳಿಗೆಗಳಲ್ಲಿ ಆಯುಷ್ ಬಗ್ಗೆ ಪರಿಚಯ ನೀಡಬಲ್ಲ ಹೊಸ ಚಿಕಿತ್ಸಾ ಕ್ರಮಗಳು, ಔಷಧ ಮಳಿಗೆಗಳು ಇತ್ಯಾದಿ ಬಹುವೈವಿಧ್ಯತೆ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಆಯುಷ್ ಹಬ್ಬ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಡಾ.ದೇವದಾಸ್ ಪುತ್ರನ್, ಡಾ.ಸುಭೋದ್ ಭಂಡಾರಿ, ಡಾ.ಗುರುಪ್ರಸಾದ್ ನಾವುಡಾ, ಡಾ.ಅಭಿಷೇಕ್, ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಕಾರ್ಯದರ್ಶಿ ಡಾ.ಸಂದೀಪ್ ಸನಿಲ್, ಡಾ.ಸತೀಶ್ ರಾವ್, ಜಿಲ್ಲಾ ಕಾರ್ಯದರ್ಶಿ ಡಾ.ಮನೋಜ್ ಶೆಟ್ಟಿ, ಉಡುಪಿ ತಾಲ್ಲೂಕು ಅಧ್ಯಕ್ಷ ಡಾ.ವಸಂತ್, ಕಾರ್ಕಳ ಅಧ್ಯಕ್ಷ ಡಾ.ರವೀಂದ್ರ, ಕುಂದಾಪುರ ಅಧ್ಯಕ್ಷ ಡಾ.ವಿಜಯ ನೆಗ್ಲೂರು, ಡಾ.ಲೋಕೆಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News