ವಿವಾಹಿತ ಮಹಿಳೆ ನಾಪತ್ತೆ
Update: 2026-01-06 21:59 IST
ಪಡುಬಿದ್ರಿ, ಜ.6: ಪಡುಬಿದ್ರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಹೊಸೂರು ಗ್ರಾಮದ ನಿಟ್ಟೂರು ಮೂಲದ ಸುರೇಶ್ ಎಂಬವರ ಪತ್ನಿ ಮಲ್ಲಿಕಾ(34) ಎಂಬವರು ಜ.5ರಂದು ಬೆಳಗ್ಗೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.
ಸುರೇಶ್ ಜಾತ್ರೆಯಲ್ಲಿ ಪಾತ್ರೆ ವ್ಯಾಪಾರ ಮಾಡಿಕೊಂಡಿದ್ದು, ಇವರ ಪತ್ನಿ ಮಲ್ಲಿಕಾ, ತನ್ನ ಮಗಳೊಂದಿಗೆ ತಾಯಿ ಮನೆಯಾದ ರಾಮನಗರಕ್ಕೆ ಹೋಗುವು ದಾಗಿ ಹೇಳಿ ಹೋಗಿದ್ದರು. ಆದರೆ ಮಲ್ಲಿಕಾ ತಾಯಿ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.