ಬ್ರಹ್ಮಾವರ | ರಿಕ್ಷಾ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
Update: 2025-12-15 22:05 IST
ಸಾಂದರ್ಭಿಕ ಚಿತ್ರ
ಬ್ರಹ್ಮಾವರ, ಡಿ.15: ರಿಕ್ಷಾವೊಂದು ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಹಾವಂಜೆ ಗ್ರಾಮದ ಮುಗ್ಗೇರಿ ಮಠ ಕ್ರಾಸ್ ಹತ್ತಿರ ಸೋಮವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಹಾವಂಜೆ ಗ್ರಾಮದ ಚಾರ್ಲಿ ಮಸ್ಕರೇನಸ್(63) ಎಂದು ಗುರುತಿಸಲಾಗಿದೆ. ಕೊಳಲಗಿರಿ ಕಡೆಯಿಂದ ಬರುತ್ತಿದ್ದ ರಿಕ್ಷಾ, ಎದುರಿನಿಂದ ಬರುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಚಾರ್ಲಿ ರಸ್ತೆಗೆ ಬಿದ್ದರೆನ್ನ ಲಾಗಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿವೆ.
ಗಂಭೀರ ಸ್ಥಿತಿಯಲ್ಲಿದ್ದ ಚಾರ್ಲಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.