×
Ad

ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2024-08-12 20:56 IST

ಫೈಲ್‌ ಫೋಟೊ 

ಕಾರ್ಕಳ, ಆ.12: ಬೆಳ್ಮಣ್ ಗ್ರಾಮದ ಜಂತ್ರ ಎಂಬಲ್ಲಿ ಜು.28ರಿಂದ ಆ.10ರ ಮಧ್ಯಾವಧಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ವಿದೇಶದಲ್ಲಿರುವ ಜ್ಯೂಲಿಯಾನ ಮಥಾಯಸ್ ಎಂಬವರ ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲನ ಬೀಗವನ್ನು ಮುರಿದು ಒಳಪ್ರವೇಶಿಸಿದ ಕಳ್ಳರು, 60ಸಾವಿರ ರೂ. ಮೌಲ್ಯದ 15 ಗ್ರಾಂ ತೂಕದ, 6 ಜೋಡಿ ವಿವಿಧ ಡಿಸೈನ್ ಇರುವ ಕಿವಿಯ ಚಿನ್ನದ ಸಣ್ಣ ಓಲೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News