ಬೈಂದೂರು | ಶಿರೂರಿನಲ್ಲಿ ಬೈಕ್ ಅಪಘಾತ; ಇಬ್ಬರು ಯುವಕರು ಮೃತ್ಯು
ಬೈಂದೂರು: ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರೂರು ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಸೋಮವಾರ ರಾತ್ರಿ ನಡೆದಿದೆ.
ಉಪ್ಪುಂದ ಜನತಾ ಕಾಲೋನಿಯ ಅಭಿಷೇಕ ಖಾರ್ವಿ (23) ಹಾಗೂ ಪ್ರವೀಣ ಖಾರ್ವಿ (23) ಮೃತಪಟ್ಟ ಯುವಕರು.
ಪ್ರವೀಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಹಾಗೂ ಅಭಿಷೇಕ ಮೀನುಗಾರಿಕೆ ಕೆಲಸ ಮಾಡುತ್ತಿದ್ದರು. ಉಪ್ಪುಂದದ ಕೊಡಿ ಹಬ್ಬಕ್ಕೆ ಆಗಮಿಸಿದ್ದ ಯುವಕರು ಸೋಮವಾರ ರಾತ್ರಿ ಉಪ್ಪುಂದದಿಂದ ಶಿರೂರು ಟೋಲ್‌ಗೇಟ್‌ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.