ಬೈಂದೂರು: ಮಳೆಯಿಂದ ಮನೆಗೆ ಹಾನಿ

Update: 2026-07-19 20:38 IST

ಉಡುಪಿ, ಜು.19: ಗಾಳಿ-ಮಳೆಯಿಂದಾಗಿ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಅಬ್ದುಲ್ಲ ಎಂಬವರ ಮನೆ ಭಾಗಶ: ಹಾನಿಗೊಂಡಿದ್ದು, ಇದರಿಂದ 80,000ಕ್ಕೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ ಮಳೆ ಇಂದು ಸಹ ಸಾಧಾರಣ ಪ್ರಮಾಣದಲ್ಲಿ ಬಂದಿದ್ದು, ದಿನದ ಹೆಚ್ಚಿನ ಹೊತ್ತು ಬಿಸಿಲಿನ ವಾತಾವರಣ ಇತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 23.3ಮಿ.ಮೀ. ಮಳೆ ಸುರಿದ ಮಾಹಿತಿ ಬಂದಿದೆ.

ಕಾರ್ಕಳದಲ್ಲಿ 30.4, ಕುಂದಾಪುರದಲ್ಲಿ 21.9, ಉಡುಪಿಯಲ್ಲಿ 15.0, ಬೈಂದೂರಿನಲ್ಲಿ 21.3, ಬ್ರಹ್ಮಾವರದಲ್ಲಿ 18.7, ಕಾಪುವಲ್ಲಿ 4.4 ಹಾಗೂ ಹೆಬ್ರಿಯಲ್ಲಿ 36.4 ಮಿ.ಮೀ. ಮಳೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News