×
Ad

ಬೈಂದೂರು: ಮೊಬೈಲ್ ಅಂಗಡಿಯಲ್ಲಿ 8 ಲಕ್ಷ ರೂ. ಮೌಲ್ಯದ ಸೊತ್ತು ಕಳ್ಳತನ

Update: 2023-08-26 21:33 IST

ಬೈಂದೂರು, ಆ.26: ಬೈಂದೂರಿನ ದೀಪಾ ಕಾಂಪ್ಲೆಕ್ಸ್‌ನಲ್ಲಿರುವ ‘ಮೊಬೈಲ್ ಪ್ಲಾನೆಟ್’ ಎಂಬ ಮೊಬೈಲ್ ಅಂಗಡಿಗೆ ಶುಕ್ರವಾರ ರಾತ್ರಿ ಯಾರೋ ಕಳ್ಳರು ಕನ್ನಹಾಕಿ ಒಟ್ಟು 8,40,000ರೂ.ಮೌಲ್ಯದ ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ಕಳ್ಳತನ ಮಾಡಿ ಕೊಂಡೊಯ್ದಿದ್ದಾರೆ ಎಂದು ಅಂಗಡಿ ಮಾಲಕ ವಿಜಯಕಾಂತ್ ತಿಳಿಸಿದ್ದಾರೆ.

ವಿಜಯಕಾಂತ್ ಅವರು ಎಂದಿನಂತೆ ರಾತ್ರಿ 9:45ಕ್ಕೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಇಂದು ಬೆಳಗ್ಗೆ 9:25ಕ್ಕೆ ಬಂದು ಅಂಗಡಿ ತೆರೆಯಲು ನೋಡುವಾಗ ಎದುರಿನ ಶೆಟರ್‌ನ ಸೈಡ್ ಲಾಕ್‌ನ್ನು ಯಾರೋ ಕಳ್ಳರು ಹರಿತ ಆಯುಧದಿಂದ ಒಡೆದು ಟಫನ್ ಗ್ಲಾಸ್‌ನ ಲಾಕ್ ಕತ್ತರಿಸಿ ಅಂಗಡಿ ಒಳಗೆ ಪ್ರವೇಶಿಸಿರುವುದು ಕಂಡುಬಂದಿದೆ.

ಕಳ್ಳರು ಅಂಗಡಿಯಲ್ಲಿದ್ದ ಒಪ್ಪೋ ಮೊಬೈಲ್ ಸೆಟ್-10, ರಿಯಲ್ ಮೀ ಮೊಬೈಲ್ ಸೆಟ್-8, ನೋಕಿಯಾ ಮೊಬೈಲ್ ಸೆಟ್-40, ಐಟೆಲ್ ಸೆಟ್-20, ಪೋಕೊ ಮೊಬೈಲ್ ಸೆಟ್-4, ಎರಡು ಲಕ್ಷ ರೂ.ಮೌಲ್ಯದ ಇತರ ವಸ್ತುಗಳು ಹಾಗೂ ಒಂದು ಲಕ್ಷ ರೂ.ನಗದನ್ನು ಕೊಂಡೊಯ್ದಿದ್ದಾರೆ. ಇವುಗಳ ಒಟ್ಟು ಮೌಲ್ಯ 8.40ಲಕ್ಷ ರೂ. ಎಂದು ಬೈಂದೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News