×
Ad

ಕಾರು ಕಳವು

Update: 2023-07-20 21:45 IST

ಉಡುಪಿ, ಜು.20: ಉದ್ಯಮಿ ಪ್ರೇಮ್ ಪ್ರಸಾದ್ ಶೆಟ್ಟಿ ಇವರು ತನ್ನ ಟೊಯೆಟಾ ಇನ್ನೋವಾ ಕಾರನ್ನು ಜು.18ರ ಬೆಳಗ್ಗೆ (ಕೆಎ 51ಎಂಕೆ 1075) ಪಿಪಿಸಿ ಒಂದನೇ ಅಡ್ಡರಸ್ತೆಯ ಆಶಾಚಂದ್ರ ಟ್ರೇಡ್ ಸೆಂಟರ್ ಎದುರು ನಿಲ್ಲಿಸಿದ್ದು, 11:30ರಿಂದ 12:45ರ ಅವಧಿಯ ನಡುವೆ ಯಾರೋ ಇನ್ನೋವಾ ಕಾರನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾರಿನ ಮೇಲೆ ಭಾರತ್ ಕೋಆಪರೇಟಿವ್ ಬ್ಯಾಂಕ್‌ನ ಉಡುಪಿ ಶಾಖೆಯಲ್ಲಿ ಸಾಲ ಇದ್ದು, ಮತ್ತೊಂದು ಕೀಯನ್ನು ಹೊಂದಿರುವ ಬ್ಯಾಂಕಿನ ಯಾವುದಾದರೂ ಸಿಬ್ಬಂದಿ ಅಥವಾ ಅವರ ಏಜೆಂಟರು ಕೃತ್ಯ ಎಸಗಿರುವ ಸಂಶಯವನ್ನು ಶೆಟ್ಟಿ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಬೆಲೆಬಾಳುವ ಸ್ವತ್ತುಗಳು ಹಾಗೂ ದಾಖಲೆಗಳಿದ್ದು, ಕಳವಾದ ಕಾರಿನ ಮೌಲ್ಯ 20 ಲಕ್ಷ ರೂ.ಎಂದು ಕೆಎಸ್‌ಪಿ ಆ್ಯಪ್ ಮೂಲಕ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News