×
Ad

ಬೆಂಗಳೂರು ಬಸ್‌ಗಳ ನಡುವೆ ಢಿಕ್ಕಿ: ಹಲವು ಪ್ರಯಾಣಿಕರಿಗೆ ಗಾಯ

Update: 2024-09-17 21:29 IST

ಕುಂದಾಪುರ, ಸೆ.17: ಬೆಂಗಳೂರು ತೆರಳುವ ಬಸ್‌ಗಳ ಮಧ್ಯೆ ಸೆ.16ರಂದು ರಾತ್ರಿ ಕುಂದಾಪುರದ ಹೆಮ್ಮಾಡಿ ಗ್ರಾಮದ ಕಾಶಿ ಮಠದ ಹತ್ತಿರ ಸಂಭವಿಸಿದ ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಶ್ರೀ ದುರ್ಗಾಂಬಾ ಸ್ಲೀಪರ್ ಬಸ್, ಚಾಲಕನ ಪ್ರಯಾಣಿಕರನ್ನು ಹತ್ತಿಸುವ ಉದ್ದೇಶದಿಂದ ಒಮ್ಮೇಲೆ ರಸ್ತೆಯಲ್ಲಿ ನಿಲ್ಲಿಸಿದ್ದು, ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಸುಗಮ ಬಸ್ ಹಿಂದಿನಿಂದ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ದುರ್ಗಾಂಬ ಬಸ್‌ನಲ್ಲಿದ್ದ ಸುಧೀರ್, ರೇವತಿ, ಜಾನು ಹಾಗೂ ಇತರೆ ಪ್ರಯಾಣಿಕರಿಗೆ ಗಾಯಗಳಾಗಿವೆ.

ಗಾಯಗೊಂಡ ಪ್ರಯಾಣಿಕರನ್ನು ಬಸ್ ಚಾಲಕ ರಸ್ತೆಯಲ್ಲಿ ಬಿಟ್ಟು ಯಾವುದೇ ಮಾಹಿತಿಯನ್ನು ನೀಡದೆ ಬಸ್ಸಿನೊಂದಿಗೆ ಸ್ಥಳ ದಿಂದ ಪರಾರಿಯಾಗಿ ರುವುದಾಗಿ ದೂರಲಾಗಿದೆ. ಸುಗಮ ಬಸ್‌ನಲ್ಲಿದ್ದ ಬಸ್ ಚಾಲಕ ಕಿರಣ, ನಿರ್ವಾಹಕ ರಾಜು ಹಾಗೂ ಪ್ರಯಾಣಿಕರಾದ ಚೇತನಾ, ಪ್ರತ್ಯುಷಾ, ಲಾವಣ್ಯ ಸಿಂಗ್ ಹಾಗೂ ಇತರೆ ಪ್ರಯಾಣಿಕರಿಗೂ ಗಾಯಗಳಾಗಿವೆ. ಗಾಯಾಳು ಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News