ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಭಾವ: ಜುಲೈಯಲ್ಲಿ ಶೇ. 27 ಕೊರತೆ
ಫೈಲ್ ಫೋಟೊ
ಉಡುಪಿ: ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಳೆ ಕೊರತೆ ಮುಂದುವರಿದಿದೆ. ಜೂನ್ ತಿಂಗಳಲ್ಲಿ ಶೇ.50ರಷ್ಟಿದ್ದ ಮಳೆ ಕೊರತೆ ಜುಲೈ ತಿಂಗಳಲ್ಲೂ ಮುಂದುವರಿದು ಶೇ.27ರಷ್ಟು ಕೊರತೆ ಕಂಡುಬಂದಿದೆ ಎಂದು ಜಿಲ್ಲೆಯ ಅಂಕಿ ಅಂಶಗಳು ಹೇಳುತ್ತವೆ.
ಅದೇ ಮಳೆಗಾಲದ ಎರಡು ತಿಂಗಳು ಅಂದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆಯ ಅಂಕಿ ಅಂಶ ನೋಡಿದರೆ ಅಲ್ಲಿ ಶೇ.35ರಷ್ಟು ಕೊರತೆ ಇದೆ. ಜನವರಿ ಒಂದರಿಂದ ಜುಲೈ 31ರವರೆಗಿನ ಲೆಕ್ಕ ನೋಡಿದಾ ಗಲೂ ಜಿಲ್ಲೆಯಲ್ಲಿ ಶೇ.37 ಮಳೆ ಕೊರತೆ ಈ ಬಾರಿ ಇರುವುದು ಗೊತ್ತಾಗುತ್ತದೆ. ಇದರ ನೇರ ಪರಿಣಾಮ ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತದ ಮೇಲೆ ಬೀಳುತ್ತದೆ ಎಂಬ ಭೀತಿ ರೈತ ವರ್ಗದಲ್ಲಿ ಉಂಟಾಗಿದೆ.
ಈ ಬಾರಿ ಎಲ್‌ನಿನೋ ಪರಿಣಾಮದ ಕುರಿತಂತೆ ವಿಜ್ಞಾನಿಗಳು ಮುನ್ನೆಚ್ಚರಿಕೆ ನೀಡಿದ್ದರೂ, ಅದರ ಪ್ರಮಾಣದ ಕುರಿ ತಂತೆ ಭಿನ್ನಾಭಿಪ್ರಾಯಗಳಿದ್ದವು. ಪಶ್ಪಿಮ ಘಟ್ಟದಲ್ಲಿ ತಪ್ಪಲಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಅದರ ಪರಿಣಾಮ ಹೆಚ್ಚಿರಲಿಕ್ಕಿಲ್ಲ ಎಂಬ ಭಾವನೆ ಇದೀಗ ತಪ್ಪಾಗಿದೆ.
ಈ ಬಾರಿ ಎಪ್ರಿಲ್-ಮೇ ತಿಂಗಳ ಮುಂಗಾರು ಪೂರ್ವ ಮಳೆಯಲ್ಲೇ ಶೇ.23ರಷ್ಟು ಕೊರತೆ ಕಂಡುಬಂದಿತ್ತು. ಇದರಿಂದ ಕೃಷಿ ಸಿದ್ಧತೆಗಾಗಿ ಜೂನ್ ತಿಂಗಳವರೆಗೆ ಕಾದ ರೈತರು ಅಲ್ಲೂ ಮಳೆ ಕೊರತೆ ಕಂಡುಬಂದಿದ್ದರಿಂದ ಹೈರಾಣರಾಗಿದ್ದರು. ಇದೀಗ ಜುಲೈ ಕೊನೆಗೂ ನಿರೀಕ್ಷಿತ ಮಟ್ಟದಲ್ಲಿ ನಾಟಿ ಮಾಡಲಾಗದೇ ರೈತರು ಭವಿಷ್ಯದ ಬಗ್ಗೆ ಚಿಂತಿತರಾಗುವಂತಾಗಿದೆ.
ಜಿಲ್ಲೆಯ ಮಟ್ಟಿಗೆ ಹೆಚ್ಚಿನ ಚಿಂತೆಗೆ ಕಾರಣವಾಗಬೇಕಿರುವುದು ಹೆಬ್ರಿಯಲ್ಲಿ ಕಂಡುಬಂದಿರುವ ತೀವ್ರ ಮಳೆ ಕೊರತೆ. ಜಿಲ್ಲೆಯಲ್ಲೇ ಅತೀ ಹೆಚ್ಚು ಮಳೆ ಬೀಳುವ ತಾಲೂಕು ಎಂಬ ಕುರಿತು ಇದ್ದ ಪ್ರತೀತಿ ಈಗ ಸುಳ್ಳಾಗಿದೆ. ಎರಡು ವರ್ಷ ಗಳ ಹಿಂದೆ ಜಿಲ್ಲೆಯ ಹೆಬ್ರಿ ಹಾಗೂ ಬ್ರಹ್ಮಾವರ ತಾಲೂಕುಗಳನ್ನು ಬರ ಬಾಧಿತ ತಾಲೂಕು ಎಂದು ಘೋಷಿಸಲಾ ಗಿತ್ತು. ಈ ಬಾರಿ ಅದೇ ಪರಿಸ್ಥಿತಿ ಮತ್ತೆ ಕಂಡುಬಂದಿದ್ದು, ಮಳೆಯಲ್ಲಿ ಅತೀ ಹೆಚ್ಚಿನ ಕೊರತೆ ಈ ಎರಡು ತಾಲೂಕು ಗಳಲ್ಲಿ ಕಾಣಿಸಿಕೊಂಡಿದೆ.
ಜುಲೈ ಒಂದರಿಂದ 31ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 1448ಮಿ.ಮೀ. ಆಗಬೇಕಿದ್ದುದ್ದು, ಇಂದಿನವರೆಗೆ ಬಿದ್ದಿರುವುದು 1058ಮಿ.ಮೀ. ಮಳೆ ಮಾತ್ರ. ಜಿಲ್ಲೆಯ ಬ್ರಹ್ಮಾವರದಲ್ಲಿ ಶೇ.36ರಷ್ಟು ಕೊರತೆ ಇದ್ದರೆ, ಹೆಬ್ರಿಯಲ್ಲಿ ಶೇ.33ರಷ್ಟು ಕೊರತೆ ಕಂಡುಬಂದಿದೆ. ಕೇವರ ಕುಂದಾಪುರ ತಾಲೂಕಿನಲ್ಲಿ ಮಾತ್ರ ವಾಡಿಕೆಗೆ ಹೋಲಿಸಿದರೆ ಶೇ.8ರಷ್ಟು ಕೊರತೆ ಇದೆ.
ಜುಲೈ ತಿಂಗಳ ಮಳೆ ವಿವರ ಹೀಗಿದೆ:-
ಕಾರ್ಕಳ: ವಾಡಿಕೆ ಮಳೆ 1503ಮಿ.ಮೀ, ಬಿದ್ದಿರುವ ಮಳೆ 1127ಮಿ.ಮೀ., ಕೊರತೆ ಶೇ.25. ಕುಂದಾಪುರ: 1179 ಮಿ.ಮೀ.- 1088ಮಿ.ಮೀ.-ಶೇ.8. ಬೈಂದೂರು: 1389ಮಿ.ಮೀ.- 1080 ಮಿ.ಮೀ.-ಶೇ.22. ಉಡುಪಿ: 1214 ಮಿ.ಮೀ.- 899ಮಿ.ಮೀ.- ಶೇ.26. ಬ್ರಹ್ಮಾವರ: 1271ಮಿ.ಮೀ., 818ಮಿ.ಮೀ.- ಶೇ.36, ಕಾಪು: 1153 ಮಿ.ಮೀ.- 854ಮಿ.ಮೀ.- ಶೇ.26. ಹೆಬ್ರಿ: 1927 ಮಿ.ಮೀ.- 1287ಮಿ.ಮೀ.- ಶೇ.33. ಜಿಲ್ಲೆ: 1448ಮಿ.ಮೀ.- 1058 ಮಿ.ಮೀ.- ಶೇ.27.
ಈ ಬಾರಿ ಮಳೆಗಾಲದಲ್ಲಿ ಮುಗಿದಿರುವ ಎರಡು ತಿಂಗಳು ಜೂನ್- ಜುಲೈ ತಿಂಗಳಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಜಿಲ್ಲೆಯಲ್ಲಿ ಶೇ.35ರಷ್ಟು ಮಳೆ ಕೊರತೆ ಕಂಡುಬರುತ್ತದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ 2775ಮಿ.ಮೀ ಮಳೆಯಾಗಬೇಕಿದ್ದಲ್ಲಿ ಈ ಬಾರಿ ಬಿದ್ದಿರುವುದು 1785 ಮಿ.ಮೀ. ಮಳೆ ಮಾತ್ರ. ಬ್ರಹ್ಮಾವರದಲ್ಲಿ ಶೇ.44ರಷ್ಟು ಹಾಗೂ ಹೆಬ್ರಿಯಲ್ಲಿ ಶೇ.42ರಷ್ಟು ಮಳೆ ಕೊರತೆ ಕಂಡುಬಂದಿದೆ.
ಜಿಲ್ಲೆಯಲ್ಲಿ ಜೂನ್-ಜುಲೈ ತಿಂಗಳು ಬಿದ್ದ ಮಳೆ ವಿವರ:-
ಕಾರ್ಕಳ: ವಾಡಿಕೆ ಮಳೆ 2773ಮಿ.ಮೀ, ಬಿದ್ದಿರುವ ಮಳೆ 1888ಮಿ.ಮೀ., ಕೊರತೆ ಶೇ.32. ಕುಂದಾಪುರ: 2370 ಮಿ.ಮೀ.- 1806ಮಿ.ಮೀ. ಕೊರತೆ ಶೇ.24. ಬೈಂದೂರು: 2746ಮಿ.ಮೀ.- 1892 ಮಿ.ಮೀ.-ಶೇ.31. ಉಡುಪಿ: 2460ಮಿ.ಮೀ.- 1614ಮಿ.ಮೀ.- ಶೇ.34. ಬ್ರಹ್ಮಾವರ: 2491ಮಿ.ಮೀ., 1392 ಮಿ.ಮೀ.- ಶೇ.44, ಕಾಪು: 2391 ಮಿ.ಮೀ.- 1621ಮಿ.ಮೀ.- ಶೇ.32. ಹೆಬ್ರಿ: 3445 ಮಿ.ಮೀ.- 1989ಮಿ.ಮೀ.- ಶೇ.42. ಜಿಲ್ಲೆ: 2754ಮಿ.ಮೀ.- 1785 ಮಿ.ಮೀ.- ಶೇ.35.
ಇನ್ನು ಈ ವರ್ಷದ ಜನವರಿ ಒಂದರಿಂದ ಜುಲೈ 31ರವರೆಗೆ ಬಿದ್ದಿರುವ ಮಳೆಯ ಅಂಕಿಅಂಶ ನೋಡಿದರೆ ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ ಕಂಡುಬರುತ್ತದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ 2554ಮಿ.ಮೀ. ಮಳೆ ಬೀಳಬೇಕಿದ್ದು, ಈ ಬಾರಿ ಬಿದ್ದಿರುವುದು 1616ಮಿ.ಮೀ. ಮಳೆ ಮಾತ್ರ. ಇಲ್ಲೂ ಬ್ರಹ್ಮಾವರ ಹಾಗೂ ಹೆಬ್ರಿಯಲ್ಲಿ ಅತ್ಯಧಿಕ ಅಂದರೆ ಶೇ.44ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಜನವರಿ-ಜುಲೈ ತಿಂಗಳು ಬಿದ್ದ ಮಳೆ ವಿವರ:-
ಕಾರ್ಕಳ: ವಾಡಿಕೆ ಮಳೆ 2551ಮಿ.ಮೀ, ಬಿದ್ದಿರುವ ಮಳೆ 1665ಮಿ.ಮೀ., ಕೊರತೆ ಶೇ.35. ಕುಂದಾಪುರ: 2172 ಮಿ.ಮೀ.- 1669ಮಿ.ಮೀ. ಕೊರತೆ ಶೇ.23. ಬೈಂದೂರು: 2526ಮಿ.ಮೀ.- 1728 ಮಿ.ಮೀ.-ಶೇ.32. ಉಡುಪಿ: 2246ಮಿ.ಮೀ.- 1424ಮಿ.ಮೀ.- ಶೇ.37. ಬ್ರಹ್ಮಾವರ: 2289ಮಿ.ಮೀ., 1286 ಮಿ.ಮೀ.- ಶೇ.44, ಕಾಪು: 2153 ಮಿ.ಮೀ.- 1413ಮಿ.ಮೀ.- ಶೇ.34. ಹೆಬ್ರಿ: 3242 ಮಿ.ಮೀ.- 1819ಮಿ.ಮೀ.- ಶೇ.44. ಜಿಲ್ಲೆ: 2554ಮಿ.ಮೀ.- 1616 ಮಿ.ಮೀ.- ಶೇ.37.