×
Ad

ಇಂದಿರಾ ಗಾಂಧಿಯಿಂದಾಗಿ ದೇಶ ಸುಭದ್ರ: ಎಂ.ಎ.ಗಫೂರ್

Update: 2025-11-20 19:05 IST

ಹೆಬ್ರಿ: ಇಂದಿರಾ ಗಾಂಧಿಯವರು ಅಂದು ಭದ್ರ ಬುನಾದಿ ಹಾಕಿಕೊಟ್ಟ ಕಾರಣ ನಮ್ಮ ದೇಶ ಇಂದು ಸುಭದ್ರವಾಗಿದೆ. ಅವರು ವ್ಯಕ್ತಿಯಲ್ಲ, ಮಹಾಶಕ್ತಿ. ದೇಶಕ್ಕಾಗಿ ಹಲವಾರು ಶಾಶ್ವತ ಕೊಡುಗೆ ನೀಡಿದ್ದಾರೆ. ಆದರೆ ಇಂದಿರಾ ಗಾಂಧಿಯವರನ್ನು ಸ್ಮರಿಸುವ ಕೆಲಸ ಆಡಳಿತ ನಡೆಸುವವರು ಕಡಿಮೆ ಮಾಡುತ್ತಿರುವುದು ದುರಂತ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ.

ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನದ ಸಂಭ್ರಮಾಚರಣೆಯ ಸಲುವಾಗಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ದೇಶವನ್ನು ಕಟ್ಟಿ ಬೆಳೆಸಿದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಸಹಿತ ಯಾವ ರಾಷ್ಟ್ರ ನಾಯಕರನ್ನು ಸ್ಮರಣೆಯನ್ನು ಆಳುವವರು ನಡೆಸದಿರುವುದು ನೋವಿನ ಸಂಗತಿ. ಆದರೆ ಅವರು ದೇಶಕ್ಕೆ ನೀಡಿದ ಸೇವೆ ತ್ಯಾಗ ಬಲಿದಾನವನ್ನು ಮರೆಮಾಚಲು ಯಾರಿಂದಲೂ ಅಸಾಧ್ಯ ಎಂದು ಅವರು ತಿಳಿಸಿದರು.

ರಾಜ್ಯದ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ, ಇಂದಿರಾ ಗಾಂಧಿಯವರ ಉಳುವವನೆ ಹೊಲದೊಡೆಯ ಕಾರ್ಯಕ್ರಮ ದಿಂದ ಇಂದು ಸಣ್ಣ ಸಮುದಾಯದವರು ತಲೆಎತ್ತಿ ಸ್ವಾಭಿಮಾನದ ಬದುಕು ನಡೆಸುವಂತಾಗಿದೆ. ಬಿಜೆಪಿಯವರು ಟೀಕೆ ಮಾಡುತ್ತಾರೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಆಡಳಿತದಿಂದ ಬಡವರ ಸಹಿತ ಜನಸಾಮಾನ್ಯರಿಗೆ ಯಾವೂದೇ ತೊಂದರೆಯಾಗಿಲ್ಲ. ಬದುಕಿಗಾಗಿ ಪ್ರಯೋಜನವಾಗಿದೆ. 20 ಅಂಶದ ಕಾರ್ಯಕ್ರಮದಿಂದ ಲೋಕದ ಕಲ್ಯಾಣವಾಗಿದೆ ಎಂದರು.

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ಕಾರ್ಕಳ ಅಧ್ಯಕ್ಷ ಮುಖಂಡ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಭಂಡಾರಿಯವರ ಪುತ್ಥಳಿಗೆ ಮಾಲಾರ್ಪಾಣೆ ಮಾಡಿ ಗೌರವಿಸಲಾಯಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನದ ಸಂಭ್ರಮಾಚರಣೆಯ ನಿವೃತ್ತ ತಹಶೀಲ್ಧಾರ್ ಕಾರ್ಕಳ ಮಾಳದ ಶಾಂತಾರಾಮ ಚಿಪ್ಳೂಣಕರ್ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಪ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ಚಾರ ಹೆರ್ಗಲ್ಲು ಸುಜನ್ ಶೆಟ್ಟಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿವಿಧ ಕ್ಷೇತ್ರಗಳ ಸಾಧಕರಾದ ಸಾಹಿತಿ ಬಿಪಿನ್ ಚಂದ್ರಪಾಲ್ ನಕ್ರೆ, ಚಾರ ಪ್ರದೀಪ್ ಹೆಬ್ಬಾರ್, ಪರೀಕ ಪ್ರಕೃತಿ ಚಿಕಿತ್ಸಾಲಯ ಡಾ.ಗೋಪಾಲ ಪೂಜಾರಿ ಶಿವಪುರ, ಹೆಬ್ರಿ ಅನಂತಪದ್ಮನಾಭ ಫ್ರೆಂಡ್ಸ್ ಅಧ್ಯಕ್ಷೆ ಸ್ಮೀತಾ ಶೇಖರ್ ಶೇರಿರ್ಗಾ ಹೆಬ್ರಿ, ಮಾವಿನಕಟ್ಟೆ ಶಂಕರ ಶೆಟ್ಟಿ ಮುನಿಯಾಲು, ವೀಣಾ ಆರ್. ಭಟ್, ಸಮಾಜ ಸೇವಕರಾದ ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್, ಹೆಬ್ರಿ ಗ್ರಾಪಂ ಸದಸ್ಯರಾದ ಸಮಾಜಸೇವಕ ಎಚ್. ಜನಾರ್ದನ್ ಹೆಬ್ರಿ, ಮಹಾಬಲ ನಾಯ್ಕ್ ಬೇಳಂಜೆ, ಕ್ರೀಡಾ ಸಾಧಕ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ, ಶಿಕ್ಷಕ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ, ನಿವೃತ್ತ ತಹಶೀಲ್ಧಾರ್ ಕಾರ್ಕಳ ಮಾಳದ ಶಾಂತಾರಾಮ ಚಿಪ್ಳೂಣಕರ್ ಸಹಿತ ಹಲವರನ್ನು ಗೌರವಿಸಲಾಯಿತು.

ಹೆಬ್ರಿಯ ಮುಖಂಡ ಉದ್ಯಮಿ ಪ್ರವೀಣ್ ಬಲ್ಲಾಳ್ ಹೆಬ್ರಿ, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಚಾರ ಗ್ರಾಪಂ ಅಧ್ಯಕ್ಷ ದಿನೇಶ ಕುಮಾರ್ ಶೆಟ್ಟಿ, ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಕಾರ್ಯದರ್ಶಿ ದೀಪಾ ಭಂಡಾರಿ, ಕೋಶಾಧಿಕಾರಿ ಜನಾರ್ಧನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ ಭಂಡಾರಿ, ಎಚ್.ವಾದಿರಾಜ ಶೆಟ್ಟಿ, ನವೀನ್ ಕೆ ಅಡ್ಯಂತಾಯ, ಸುಕುಮಾರ್ ಮುನಿಯಾಲ್, ಮೋಹನದಾಸ ನಾಯಕ್ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್ ಶಿವಪುರ, ಬೈಕಾಡಿ ಮಂಜುನಾಥ ರಾವ್ ಶಿವಪುರ, ಜಾನ್ ಟೆಲ್ಲಿಸ್ ಅಜೆಕಾರು ಮುಂತಾದವರು ಉಪಸ್ಥಿತರಿದ್ದರು.

ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಪ್ರಸಾದ್ ಶೆಟ್ಟಿ ಹೆಬ್ರಿ ನಿರೂಪಿಸಿ ಜನಾರ್ದನ್ ಎಚ್. ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News