×
Ad

ಬ್ರಹ್ಮಾವರ ತಹಶೀಲ್ದಾರ್‌ಗೆ ದಸಂಸದಿಂದ ಬೀಳ್ಕೊಡುಗೆ- ಸನ್ಮಾನ

Update: 2023-08-11 20:14 IST

ಬ್ರಹ್ಮಾವರ, ಆ.11: ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ತಹಶೀಲ್ದಾರರಾಗಿ ಸೇವೆ ಸಲ್ಲಿಸಿ ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡ ರಾಜಶೇಖರ ಮೂರ್ತಿ ಅವರಿಗೆ ಸಾರ್ವಜನಿಕ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭವನ್ನು ಬ್ರಹ್ಮಾವರ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಬ್ರಹ್ಮಾವರ ಉಪ ತಹಶೀಲ್ದಾರ್ ಡಿ.ಟಿ.ರಾಘವೇಂದ್ರ, ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಐಕ್ಯ ಒಕ್ಕೂಟದ ಪ್ರಧಾನ ಸಂಚಾಲಕರು ಮತ್ತು ವಕೀಲರಾದ ಮಂಜುನಾಥ್ ಗಿಳಿಯಾರ್, ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್ ರಾಜ್ ಬಿರ್ತಿ, ವಾಸುದೇವ್ ಮುದ್ದೂರ್, ಗೋಪಾಲಕೃಷ್ಣ ಕುಂದಾಪುರ, ಪರಮೇಶ್ವರ್ ಉಪ್ಪೂರು, ವಾರಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್. ನಾರಾ ಯಣ್, ಪ್ರಕಾಶ್ ಬಿ.ಬಿ., ಶಿಕ್ಷಣ ಸಂಯೋಜಕರು ಬ್ರಹ್ಮಾವರ, ಅಧ್ಯಾಪಕ, ಸಾಹಿತಿ ವರದರಾಜ್ ಬಿರ್ತಿ, ಶಿವಾನಂದ ಬಿರ್ತಿ, ಬ್ರಹ್ಮಾವರ ತಾಲೂಕು ಸಂಚಾಲಕ ಶ್ರೀನಿವಾಸ್ ವಡ್ಡರ್ಸೆ, ಶರತ್ ಆರೂರು, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News