×
Ad

ಮಾಹೆಗೆ ಎಫ್‌ಐಸಿಸಿಐ ಉನ್ನತ ಶಿಕ್ಷಣ ಎಕ್ಸಲೆನ್ಸ್ ಅವಾರ್ಡ್

Update: 2023-12-13 21:10 IST

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಪ್ರತಿಷ್ಠಿತ ಎಫ್‌ಐಸಿಸಿಐ ಉನ್ನತ ಶಿಕ್ಷಣಕ್ಕಿರುವ ಎಕ್ಸಲೆನ್ಸ್ ಅವಾರ್ಡ್-2023ನ್ನು ಪಡೆದಿದೆ.

ಹೊಸದಿಲ್ಲಿಯಲ್ಲಿ ನಡೆದ 18ನೇ ಎಫ್‌ಐಸಿಸಿಐ ಉನ್ನತ ಶಿಕ್ಷಣ ಶೃಂಗಸಭೆಯಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ಗೆ ಪ್ರತಿಷ್ಠಿತ ಎಫ್‌ಐಸಿಸಿಐ ಉನ್ನತ ಶಿಕ್ಷಣದಲ್ಲಿ ಎಕ್ಸಲೆನ್ಸ್ ಅವಾರ್ಡ್‌ನ್ನು ‘ಜಾಗತೀಕರಣದಲ್ಲಿ ಶ್ರೇಷ್ಠತೆ’ ಪ್ರಶಸ್ತಿ ವಿಭಾಗದ ಅಡಿಯಲ್ಲಿ ನೀಡಿ ಗೌರವಿಸಲಾಗಿದೆ.

ಹೊಸದಿಲ್ಲಿಯ ಡಾ.ಅಂಬೇಡ್ಕರ್ ಇಂಟರ್‌ನೇಷನಲ್ ಸೆಂಟರ್‌ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಹೆಯ ಗುಣಮಟ್ಟ ನಿರ್ದೇಶಕ ಡಾ.ಕ್ರಿಸ್ಟೋಫರ್ ಸುಧಾಕರ್ ಅವರು ಮಾಹೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಜಾಗತೀಕರಣದಲ್ಲಿ ಮಾಹೆಯ ದೂರದೃಷ್ಟಿಯ ದಾಪುಗಾಲುಗಳನ್ನು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಈ ಸ್ಪರ್ಧೆಯಲ್ಲಿ ಅಂಗೀಕರಿಸಿದೆ. ಅಲ್ಲಿ ಅದು ದೇಶದಾದ್ಯಂತದಿಂದ ಬಂದ ಇತರ ಪ್ರತಿಷ್ಠಿತ ಸಂಸ್ಥೆಗಳ ಎದುರು ಸ್ಪರ್ಧೆಯಲ್ಲಿ ಭಾಗವಹಿಸಿತ್ತು.

ವಿಶ್ವವಿದ್ಯಾನಿಲಯದ ಅಸಾಧಾರಣ ಪ್ರಯತ್ನಗಳು, ಜಾಗತಿಕ ಪಾಲುದಾರಿಕೆ ಗಳು, ಸಾಗರೋತ್ತರ ಕ್ಯಾಂಪಸ್‌ಗಳು, ದ್ವಿ-ರಾಷ್ಟ್ರೀಯ ಸಂಶೋಧನಾ ಅನುದಾನಗಳು, ಸಹಕಾರಿ ಸಂಶೋಧನೆ ಮತ್ತು ಸಹ-ಮೇಲ್ವಿಚಾರಣೆಯ ಪಿಎಚ್‌ಡಿ ಮಾರ್ಗದರ್ಶಿಗಳು, ವಿದ್ಯಾರ್ಥಿಗಳ ವಿನಿಮಯ, ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸುವುದು ಮತ್ತು ನಿಜವಾದ ಜಾಗತಿಕ ಶಿಕ್ಷಣದ ಅನುಭವವನ್ನು ಒದಗಿಸುವುದು ಸ್ಪರ್ಧೆಯಲ್ಲಿ ಪರಿಗಣಿತವಾದ ಪ್ರಮುಖ ಅಂಶಗಳಾಗಿವೆ.

ಮಾಹೆ ತನ್ನ ವಿದ್ಯಾರ್ಥಿಗಳನ್ನು ಸ್ಥಳೀಯ ಸನ್ನಿವೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿಯೂ ಉತ್ತಮ ಸಾಧನೆ ಮಾಡಲು ಸಿದ್ಧಪಡಿಸುತ್ತದೆ. ಈ ಪ್ರಶಸ್ತಿಯು ಶಿಕ್ಷಣದಲ್ಲಿ ಉತ್ಕೃಷ್ಟತೆಯ ಅನ್ವೇಷಣೆಯನ್ನು ಮುಂದುವರಿಸಲು ಮತ್ತು ಅದರ ಜಾಗತಿಕ ಹೆಜ್ಜೆಗುರುತನ್ನು ಇನ್ನಷ್ಟು ಬಲಪಡಿಸಲು ಮಾಹೆಗೆ ಪ್ರೇರಣೆಯಾಗಿದೆ ಎಂದು ಮಾಹೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News