×
Ad

ವೀಸಾ ಮಾಡಿಸಿಕೊಡುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು

Update: 2024-08-16 21:26 IST

ಕೊಲ್ಲೂರು, ಆ.16: ವಿದೇಶಕ್ಕೆ ಹೋಗಲು ವೀಸಾ ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಜಡ್ಕಲ್ ಗ್ರಾಮದ ಶಾಜನ್ ಎಂಬವರ ಮಗ ಶಿಜೋ ವಿದ್ಯಾಬ್ಯಾಸ ಮುಗಿದ ಬಳಿಕ ಉದ್ಯೋಗ ಹುಡುಕುತ್ತಿದ್ದು, ಶಿಜೋ ಜೊತೆ ಓದಿರುವ ಗೌತಮ್, ನ್ಯೂಜಿಲೆಂಡ್‌ಗೆ ಹೋಗಲು ವೀಸಾ ಮಾಡಿಕೊಡಲು 15,50,000 ರೂ. ಹಣ ಕೇಳಿದ್ದರು. ಇದನ್ನು ನಂಬಿದ ಅವರು ಅವರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 11,75,000ರೂ. ಹಣವನ್ನು ಪಾವತಿಸಿದ್ದರು. ಬಳಿಕ ವೀಸಾ ನೀಡದೇ ಮೊಸ ಮಾಡಿರುವುದಾಗಿ ದೂರಲಾಗಿದೆ. ಹಣ ವಾಪಾಸು ನೀಡುವಂತೆ ಅವರ ಮನೆಗೆ ಹೋದಾಗ 3,75,000ರೂ. ಹಣ ವಾಪಾಸು ನೀಡಿದ್ದು, ಬಾಕಿ ಉಳಿದ 8,95,000ರೂ. ಹಣವನ್ನು 15 ದಿನಗಳಲ್ಲಿ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News