ಆನ್‌ಲೈನ್ ಹೂಡಿಕೆ ನೆಪದಲ್ಲಿ ವಂಚನೆ: ಪ್ರಕರಣ ದಾಖಲು
Update: 2025-09-07 22:08 IST
ಮಂಗಳೂರು, ಸೆ.7: ಆನ್‌ಲೈನ್ ಹೂಡಿಕೆ ನೆಪದಲ್ಲಿ ವ್ಯಕ್ತಿಗೆ 1,14,50,000 ರೂ. ವಂಚನೆ ಮಾಡಿರುವ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಉಳಿತಾಯ ಮಾಡಿದ ಹಣವನ್ನು ಬ್ಯಾಂಕ್ ಖಾತೆಯಲ್ಲಿರಿಸಿದ್ದೆ. ಜು.17ರಂದು ತನಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ವಾಟ್ಸ್‌ಆ್ಯಪ್ ಮಾಡಿ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸುವ ಆಮಿಷ ತೋರಿಸಿದ್ದ. ಆ.11ರಂದು ಅಪರಿಚಿತ ಮಹಿಳೆ ಸಂಪರ್ಕಿಸಿ ಲಿಂಕ್ ಹಾಕಿದ್ದಳು. ಬಳಿಕ ತಾನು ಅಕೌಂಟ್ ಕ್ರಿಯೆಟ್ ಮಾಡಿದ್ದೆ. ಬಳಿಕ ಹಂತಹಂತವಾಗಿ ಆರ್‌ಟಿಜಿಎಸ್/ನೆಫ್ಟ್ ಮೂಲಕ 1,14,50,000ರೂ. ಮೋಸದಿಂದ ವರ್ಗಾಯಿಸಿ ಆನ್‌ಲೈನ್ ವಂಚನೆ ಮಾಡಿಕೊಂಡಿದ್ದಾರೆ ಎಂದು ಹಣ ಕಳಕೊಂಡವರು ದೂರಿನಲ್ಲಿ ತಿಳಿಸಿದ್ದಾರೆ.