×
Ad

ಫೇಸ್‌ಬುಕ್‌ನಲ್ಲಿ ಧ್ವೇಷದ ಸಂದೇಶ: ಪ್ರಕರಣ ದಾಖಲು

Update: 2026-01-14 21:34 IST

ಕಾರ್ಕಳ, ಜ.14: ಸಾಮಾಜಿಕ ಜಾಲತಾಣದಲ್ಲಿ ಪರಶುರಾಮ ಥೀಮ್ ಪಾರ್ಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಸಂಘರ್ಷ ಹುಟ್ಟುಹಾಕುವ ಸಂದೇಶ ಪೋಸ್ಟ್ ಹಾಕಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತೋಷ ದೇವಾಡಿಗ ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ಕಳ್ಳತನಕ್ಕೆ ಟ್ವಿಸ್ಟ್, ಥೀಮ್ ಪಾರ್ಕ್ ಕಟ್ಟಡ ಒಳಗಿನ ಫ್ಯಾನ್ ಎಲೆಕ್ಟ್ರಿಕಲ್ ಉಪಕರಣಗಳನ್ನು ಮೊದಲೇ ಎಗರಿಸಿದ ಆರ್‌ಎಸ್‌ಎಸ್ ಕಾರ್ಯಕರ್ತ’ ಎಂಬ ಬರವಣಿಗೆಯ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದನು.

ಈತ ಜಾತಿ ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟು ಹಾಕಿ ಸಮಾಜದಲ್ಲಿ ಅಶಾಂತಿಯನ್ನು ಕೆಡಿಸುವ ಹಾಗೂ ರಾಜಕೀಯ ದುರ್ಲಾಭ ಪಡೆಯುವ ಉದ್ದೇಶದಿಂದ ಈ ಸಂದೇಶವನ್ನು ಪೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವು ದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News