ಉಡುಪಿ: ವಿವಿಧ ಧಾನ್ಯಗಳಲ್ಲಿ ಮೂಡಿಬಂದ ಶ್ರೀಕೃಷ್ಣ
Update: 2026-01-14 20:57 IST
ಉಡುಪಿ, ಜ.14: ಈ ವಾರದ ಕೊನೆಯಲ್ಲಿ ನಡೆಯುವ ಉಡುಪಿ ಪರ್ಯಾಯ ಮಹೋತ್ಸವದ ಆಕರ್ಷಣೆಯಾಗಿ ನಗರದ ಆಭರಣ ಜ್ಯುವೆಲ್ಲರಿ ಆವರಣದಲ್ಲಿ ಒಂದು ವಿಶಿಷ್ಟ ಶ್ರೀಕೃಷ್ಣನ ಕಲಾಕೃತಿಯನ್ನು ರಚಿಸಿ ಪ್ರದರ್ಶನಕ್ಕಿಡಲಾಗಿದೆ.
ಉಡುಪಿ ಆರ್ಟಿಸ್ಟ್ ಫೋರಂನ ಕಲಾವಿದರಾದ ಶ್ರೀನಾಥ ಮಣಿಪಾಲ ಇವರು ಸುಮಾರು 20 ಕೆ.ಜಿ. ವಿವಿಧ ಧಾನ್ಯ ಗಳನ್ನು ಬಳಸಿ ಸುಮಾರು 9 ಅಡಿ ಎತ್ತರದ ಕೃಷ್ಣನ ಸುಂದರ ಕಲಾಕೃತಿಯನ್ನು ರಚಿಸಿ, ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶನಕ್ಕಿಟ್ಟಿದ್ದಾರೆ.
ಕಲಾಕೃತಿಯನ್ನು ರಚಿಸಲು ಹುರಿಗಡಲೆ, ತೊಗರಿಬೇಳೆ, ಅವರೆಕಾಳು, ಬಟಾಣಿ ಕಾಳು, ಹೆಸರು, ಉದ್ದು, ತಿಂಗಳಾ ವರೆ ಮುಂತಾದ ಧಾನ್ಯಗಳನ್ನು ವರ್ಣಕ್ಕನುಸಾರವಾಗಿ ಪೋಣಿಸಲಾಗಿದೆ. ಆರ್ಟಿಸ್ಟ್ ಫೋರಂನ ಸಹ ಕಲಾವಿದ ರವಿ ಹಿರೇಬೆಟ್ಟು ಕಲಾಕೃತಿಯನ್ನು ರಚಿಸಲು ಸಹಕರಿಸಿದ್ದು ಎಂದು ಕಲಾವಿದ ಶ್ರೀನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.