×
Ad

ಹೆಬ್ರಿ: ಸೀತಾನದಿಯಲ್ಲಿ ಮುಳುಗಿ ವೈದ್ಯ ಸಹಿತ ಇಬ್ಬರು ಮೃತ್ಯು

Update: 2024-02-26 09:45 IST
ಸಾಂದರ್ಭಿಕ ಚಿತ್ರ

ಹೆಬ್ರಿ, ಫೆ.26: ಸೀತಾನದಿ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ವೈದ್ಯ ಸೇರಿದಂತೆ ಇಬ್ಬರು ಮುಳುಗಿ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ನೆಲ್ಲಿಕಟ್ಟೆ ಕ್ರಾಸ್ ನಲ್ಲಿ ಘಟನೆ ರವಿವಾರ ಸಂಜೆ ಸಂಭವಿಸಿದೆ.

ಮೃತರನ್ನು ಮೂಲತಃ ಶಿವಮೊಗ್ಗದ, ಪ್ರಸಕ್ತ ಶೃಂಗೇರಿಯಲ್ಲಿ ವೈದ್ಯರಾಗಿರುವ ಡಾ.ದೀಪಕ್(34) ಹಾಗೂ ಶಿವಮೊಗ್ಗದ ಉದ್ಯಮಿ ಸಿನು ಡ್ಯಾನಿಯಲ್ (40) ಎಂದು ಗುರುತಿಸಲಾಗಿದೆ.

ಸಿನು ಡ್ಯಾನಿಯಲ್ ರವಿವಾರ ತನ್ನ ವೈದ್ಯಮಿತ್ರ ಡಾ.ವಿನ್ಸೆಂಟ್ ಎಂ.ಸಿ. ಮೋಹನ್ ಎಂಬವರ ಜೊತೆ ಶಿವಮೊಗ್ಗದಿಂದ ಹೆಬ್ರಿಗೆ ಆಗಮಿಸಿದ್ದರು. ಅಲ್ಲಿಗೆ ಮಣಿಪಾಲದಿಂದ ಡಾ.ದೀಪಕ್ ಕೂಡಾ ಆಗಮಿಸಿದ್ದು, ಅವರು ಜೊತೆಯಾಗಿ ಸೋಮೇಶ್ವರ ಕಡೆ ಹೊರಟವರು ದಾರಿಮಧ್ಯೆ ನೆಲ್ಲಿಕಟ್ಟೆ ಕ್ರಾಸ್ ನಲ್ಲಿ ಸೀತಾನದಿಯಲ್ಲಿ ಸ್ನಾನಕ್ಕಿಳಿದಿದ್ದಾರೆ. ಸಿನು ಡ್ಯಾನಿಯಲ್ ಸ್ನಾನ ಮಾಡುತ್ತಾ ಮುಂದೆ ಹೋಗಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದರೆನ್ನಲಾಗಿದೆ. ಇದನ್ನು ಗಮನಿಸಿದ ದೀಪಕ್ ನೀರಿಗೆ ಹಾರಿ ಅವರನ್ನು ರಕ್ಷಿಸಲು ಮುಂದಾಗಿದ್ದು, ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಈಜು ಬಾರದಿದ್ದರೂ ಡಾ.ವಿನ್ಸೆಂಟ್ ಸ್ನೇಹಿತರನ್ನು ರಕ್ಷಿಸಲು ನದಿಗೆ ಧುಮುಕಿದ್ದಾರೆ. ಆದರೆ ಅವರನ್ನು ರಕ್ಷಿಸಲು ಸಾಧ್ಯವಾಗದೆ ಮರದ ಬೇರನ್ನು ಹಿಡಿದು ಮೇಲೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News