ಹೆನ್ನಾಬೈಲ್: ಸಂಭ್ರಮದ ʼಈದುಲ್ ಅಝ್‌ಹಾʼ ಆಚರಣೆ
ಹೆನ್ನಾಬೈಲ್: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ‘ಈದುಲ್ ಅಝ್‌ಹಾ’ (ಬಕ್ರೀದ್) ವನ್ನು ಹೆನ್ನಾಬೈಲ್ ಈದ್ಗಾ ಮಸೀದಿಯಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಇಂದು ಆಚರಿಸಲಾಯಿತು.
ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಧರ್ಮಗುರು ಮೌಲಾನಾ ಅಬ್ದುಲ್ ಹಫೀಝ್ ಧಾರ್ಮಿಕ ಪ್ರವಚನ ನೀಡಿದರು.
ಸುಮಾರು 5 ಸಾವಿರ ವರ್ಷಗಳ ಹಿಂದಿನ ಪ್ರವಾದಿ ಇಬ್ರಾಹಿಮ್ ಅವರ ತ್ಯಾಗ ಬಲಿದಾನಗಳ ದೃಷ್ಟಾಂತವು ಮನುಕುಲದಲ್ಲಿ ಮಹಾ ಸಂವೇದನೆ ಮೂಡಿಸಿದ ಘಟನೆ. ನೀರಿಗಾಗಿ ಹಾಜಿರಾ ಅವರು ಓಡಿದ ಎರಡು ಪರ್ವತಗಳ ನಡುವಿನ ಓಟ ಮತ್ತು ಅದಕ್ಕೆ ಪ್ರತಿಯಾಗಿ ಅಲ್ಲಾಹನು ನೀರಿಲ್ಲದ ಮರುಭೂಮಿಯಲ್ಲಿ ಇಡೀ ಜಗತ್ತು ಕುಡಿಯುವಷ್ಟು ನೀರನ್ನು ಸೃಷ್ಟಿಸಿದ್ದು ಕಾಲಾತೀತವಾದ ಜಾಗತಿಕ ಚರಿತ್ರೆಯ ಮಹಾನ್ ವಿಸ್ಮಯಗಳಲ್ಲಿ ಒಂದು. ದೇವನ ಇರುವಿಕೆ, ಪ್ರಭಾವ ಮತ್ತು ಪ್ರೀತಿ ಎಲ್ಲವೂ ಸಂಗಮವಾಗಿದ್ದನ್ನು ಸಂಭ್ರಮಿಸಲು ಈ ಹಬ್ಬವಿದೆ. ಯಾವುದೇ ಹಬ್ಬದ ಸಂಭ್ರಮವು ಸೌಹಾರ್ದಕ್ಕೆ ಮತ್ತು ಸಹಧರ್ಮೀಯರೊಂದಿಗಿನ ಸಹಜೀವನಕ್ಕೆ ಪೂರಕವಾಗಿರಬೇಕು ಎಂದು ಮೌಲಾನಾ ಅಬ್ದುಲ್ ಹಫೀಝ್ ಹೇಳಿದರು.
ಪ್ರಾರ್ಥನಾ ಸಭೆಯಲ್ಲಿ ಅಲಿಯಬ್ಬ ತೋಟದಮನೆ, ಸೈಯದ್ ರಫೀಕ್, ಹಸನ್ ಸಾಹೇಬ್, ಶಾಹುಲ್ ಹಮೀದ್, ಸೈಯದ್ ಅಬ್ಬಾಸ್, ಸೈಯದ್ ಇಕ್ಬಾಲ್ , ಅಮಾನ್ ಜಮಾಲ್, ಇಬ್ರಾಹಿಂ ಸೈಯದ್, ಆದಮ್ ಸಾಹೇಬ್, ಅಶ್ರಫ್ ಕೋಟೇಶ್ವರ, ಅಶ್ಫಾಕ್ ಸಾಬ್ಜನ್, ಸಲೀಮ್ ಮೌಲಾಲಿ, ಅಬ್ದುಲ್ ರೆಹಮಾನ್, ಮುಹಮ್ಮದ್ ರಫೀಕ್, ಶಬ್ಬೀರ್ ಸಾಹೇಬ್, ಅಬ್ದುಲ್ ಹಮೀದ್, ಅಲ್ತಾಫ್ ಅಲಿ, ಬಾವ ಸಾಹೇಬ್, ಆರಿಫ್ ಸಾಹೇಬ್ ಹಾಗು ಇತರರು ಉಪಸ್ಥಿತರಿದ್ದರು.