×
Ad

ಉಡುಪಿಯ ವೈದ್ಯ ಡಾ. ಕೀರ್ತನ್ ಉಪಾಧ್ಯ ಅವರಿಂದ ದ್ವೇಷ ಟ್ವೀಟ್ ; ವ್ಯಾಪಕ ಆಕ್ರೋಶ, ಕ್ರಮಕ್ಕೆ ಆಗ್ರಹ

Update: 2024-07-15 00:36 IST

ಉಡುಪಿಯ ಬ್ರಹ್ಮಾವರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಡಾ. ಕೀರ್ತನ್ ಉಪಾಧ್ಯ ಅವರ ಎಕ್ಸ್ ಖಾತೆಯಿಂದ ಮಾಡಲಾಗಿದೆ ಎನ್ನಲಾದ ಟ್ವೀಟ್ ಒಂದು ವಿವಾದ ಸೃಷ್ಟಿಸಿದೆ.

ಜುಲೈ 13 ರಂದು ಎಕ್ಸ್ ನಲ್ಲಿ ಒಬ್ಬರು " ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು ? " ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಉಡುಪಿಯ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಕೀರ್ತನ್ ಉಪಾಧ್ಯ ಎಂಬವರು " ಮುಸ್ಲಿಂ ಕಮ್ಯುನಿಟಿ ' ಎಂದು ಉತ್ತರಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಡಾ. ಕೀರ್ತನ್ ಉಪಾಧ್ಯ ಅವರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆಲ್ಟ್ ನ್ಯೂಸ್ ನ ಸಹ ಸ್ಥಾಪಕ ಮೊಹಮ್ಮದ್ ಜುಬೇರ್ ಹೇಳಿದ್ದಾರೆ.

ಡಾ. ಕೀರ್ತನ್ ಉಪಾಧ್ಯ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವೈದ್ಯ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬ ಇಂತಹ ಸಮುದಾಯ ದ್ವೇಷದ ಹೇಳಿಕೆ ಕೊಡುವುದು ಖಂಡನೀಯ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ. ಕೀರ್ತನ್ ಉಪಾಧ್ಯ ಅವರ ಹೇಳಿಕೆಯ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಾ. ಕೀರ್ತನ್ ಉಪಾಧ್ಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನರು ಕರ್ನಾಟಕ ಡಿಜಿಪಿ ಅವರನ್ನು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.

ಡಾ. ಕೀರ್ತನ್ ಉಪಾಧ್ಯ ತಾನು ಮಾಡಿದ್ದ ವಿವಾದಾತ್ಮಕ ಟ್ವೀಟ್ ಅನ್ನು ಡಿಲೀಟ್ ಮಾಡಿ ತನ್ನ ಎಕ್ಸ್ ಖಾತೆಯನ್ನೂ ಲಾಕ್ ಮಾಡಿ ಅವರ ಯಾವುದೇ ಟ್ವೀಟ್ ಅನ್ನು ನೋಡಲು ಆಗದಂತೆ ಮಾಡಿದ್ದಾರೆ ಎಂದು ಮೊಹಮ್ಮದ್ ಜುಬೇರ್ ಹೇಳಿದ್ದಾರೆ.

ಡಾ. ಕೀರ್ತನ್ ಉಪಾಧ್ಯ ಅವರು ಇನ್ನೊಂದು ಟ್ವೀಟ್ ಮಾಡಿ ಯಾರೋ ತನ್ನ ಖಾತೆಯನ್ನು ಹ್ಯಾಕ್ ಮಾಡಿ ಅಂತಹ ಟ್ವೀಟ್ ಮಾಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಡಾ. ಕೀರ್ತನ್ ಉಪಾಧ್ಯ ಈ ಹಿಂದೆಯೂ ಇದೇ ರೀತಿಯ ಇಸ್ಲಾಂ ದ್ವೇಷಿ ಟ್ವೀಟ್ ಮಾಡಿದ್ದಾರೆ ಎಂದು ಜನ ಅವರ ಈ ಹಿಂದಿನ ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿದ್ದಾರೆ.

ಈಗ ಡಾ. ಕೀರ್ತನ್ ಉಪಾಧ್ಯ ಅವರ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಆಗಲಿದೆ ಎಂದು ಕಾದು ನೋಡಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News