×
Ad

ಪೋಷಕರು ಮಕ್ಕಳನ್ನು ನಿಯಂತ್ರಿಸದೆ ಸ್ನೇಹಪರವಾಗಿರುವುದು ಮುಖ್ಯ: ಸೌಜನ್ಯ ಶೆಟ್ಟಿ

Update: 2025-11-11 16:25 IST

ಉಡುಪಿ, ನ.11: ಪೋಷಕರು ಮಕ್ಕಳನ್ನು ಅತಿಯಾಗಿ ನಿರ್ಬಂಧಿಸುವ ಅಥವಾ ನಿಯಂತ್ರಿಸುವ ಬದಲು ಸ್ನೇಹಪರ ಹಾಗೂ ಬೆಂಬಲ ನೀಡುವ ವಾತಾವರಣವನ್ನು ಸೃಷ್ಟಿಸಬೇಕು ಎಂದು ಉಡುಪಿ ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ಅಧಿಕಾರಿ ಮತ್ತು ಸಮಾಲೋಚಕಿ ಸೌಜನ್ಯ ಶೆಟ್ಟಿ ಹೇಳಿದ್ದಾರೆ.

ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನ.8ರಂದು ನಡೆದ ಶಿಕ್ಷಕ-ರಕ್ಷಕ ಸಭೆಯಲ್ಲಿ ಯುವ ಪ್ರೌಢಾವಸ್ಥೆ: ಪೋಷಕರಲ್ಲಿ ಹೊಸ ಅಧ್ಯಾಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಬಲಪಡಿಸಬೇಕು. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯ ವಿವಿಧ ಅಂಶಗಳನ್ನು ಚರ್ಚಿಸಬೇಕು. ಮಕ್ಕಳ ಪ್ರೌಢಾವಸ್ಥೆಯ ಪರಿವರ್ತನೆಯ ಸಮಯದಲ್ಲಿ ಪೋಷಕರ ಬೆಂಬಲ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಅತಿಯಾದ ನಿಯಂತ್ರಣವು ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಮೇಲೆ ಪರಿಣಾಮವನ್ನು ಬೀರುತ್ತದೆ ಅದಕ್ಕೆ ಬದಲಾಗಿ ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸುವ ಮೂಲಕ ಅವರಲ್ಲಿ ನಂಬಿಕೆ ಮತ್ತು ಜವಬ್ದಾರಿಯನ್ನು ಬೆಳೆಸಬಹುದು ಎಂದರು.

ಶಿಕ್ಷಣದ ಹಂತದಲ್ಲಿ ಹಣ, ಮಾಧ್ಯಮ, ಮೊಬೈಲ್ ಫೋನ್ ಗಳು ಮತ್ತು ಮೋಟಾರ್ ಬೈಕ್ ಗಳ ನಕಾರಾತ್ಮಕ ಪ್ರಭಾವದ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಿದರು. ಪೋಷಕರು ಉತ್ತಮ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡರೆ, ಮಕ್ಕಳು ಬಾಹ್ಯ ಪ್ರಭಾವಗಳಿಂದ ವಿಚಲಿತರಾಗುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದರು.

ಸಂಸ್ಥೆಯ ಶೈಕ್ಷಣಿಕ ಡೀನ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News