×
Ad

ಜು.31: ರಕ್ತದಾನ ಶಿಬಿರ -ರಕ್ತದಾನಿಗಳಿಗೆ ಸನ್ಮಾನ

Update: 2025-07-24 18:20 IST

ಉಡುಪಿ, ಜು.24: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯ 12ನೇ ವಾರ್ಷಿಕೋತ್ಸ ವದ ಪ್ರಯುಕ್ತ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯ ಜಂಟಿ ಆಶ್ರಯ ದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಜು.31ರಂದು ಬೆಳಗ್ಗೆ 9.30ಕ್ಕೆ ಉಡುಪಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಅತಿಥಿಗಳಾಗಿ ಮುಂಡ್ಕೂರು ದುರ್ಗಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಸುರೇಂದ್ರ ಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ, ಉಡುಪಿ ಜಿಲ್ಲಾಸ್ಪತ್ರೆ ಮುಖ್ಯಸ್ಥ ಡಾ.ವೀಣಾ ಕುಮಾರಿ ಭಾಗವಹಿಸಲಿರುವರು.

ರಕ್ತದಾನಿಗಳಾದ ದಿಶಾನ್ ಪೂಜಾರಿ, ಶಾಂತರಾಮ್ ಮೊಗವೀರ, ಝಾಕೀರ್ ಹುಸೈನ್, ವಿನುತಾ ಕಿರಣ್, ಶ್ರೀನಿವಾಸ್ ಪ್ರಸಾದ್ ಮಯ್ಯಜಯರಾಜ್ ಸಾಲಿಯಾನ್, ಗುರುಚರಣ್ ಗಂಗೊಳ್ಳಿ, ನಿತ್ಯಾ ನಂದ್ ಅಮೀನ್, ಚೇತನ್ ಶಂಕರಪುರ, ಅಬ್ದುಲ್ ಹಮೀದ್ ಉಚ್ಚಿಲ ಅವರಿಗೆ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News