ಜು.21-22: ಉಡುಪಿ ನಗರದ ನೀರು ಸರಬರಾಜಿನಲ್ಲಿ ವ್ಯತ್ಯಯ
Update: 2023-07-19 19:38 IST
ಉಡುಪಿ, ಜು.19: ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಸ್ವರ್ಣಾ ನದಿಯ ಬಜೆ ನೀರು ಶುದ್ಧೀಕರಣ ಘಟಕದಲ್ಲಿ ಕ್ಲುಬಿಕಲ್ ಮೀಟರ್, ಟ್ಯಾಂಕ್ ಕ್ಲೀನಿಂಗ್ ಹಾಗೂ ಗೇಟ್ ವಾಲ್ವ್ ಫಿಕ್ಸಿಂಗ್ ಇತ್ಯಾದಿ ಕೆಲಸಗಳನ್ನು ನಿರ್ವಹಿಸಬೇಕಾಗಿರುವುದರಿಂದ, ಜುಲೈ 21ರ ಬೆಳಗ್ಗೆ 6ರಿಂದ ಜು.22ರ ಬೆಳಗ್ಗೆ 6ರವರೆಗೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನಗರಸಭೆ ಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.