ಕೋಡಿ ಬ್ಯಾರೀಸ್ ಸಂಸ್ಥೆಗಳ ವಾರ್ಷಿಕ ಕ್ರೀಡೋತ್ಸವ ಸಮರೋಪ
ಕುಂದಾಪುರ: ಕೋಡಿ ಬ್ಯಾರೀಸ್ ಸಮೂಹ ಸಂಸ್ಥೆಯ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದ ಸಮರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪ ಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ, 120 ವರ್ಷಗಳ ಇತಿಹಾಸ ಹೊಂದಿರುವ ಬ್ಯಾರೀಸ್ ಸಂಸ್ಥೆಯ ಆಶಯ ಈ ಭಾಗದ ಪರಿಸರದಲ್ಲಿರುವ ಕಟ್ಟಕಡೆಯ ಮಗು ಶಿಕ್ಷಣ ವಂಚಿತರಾಗದೆ ಸುಶಿಕ್ಷಿತ ರನ್ನಾಗಿಸಬೇಕೆಂಬ ಉದ್ದೇಶವನ್ನು ಹೊಂದಿದ ಹೆಮ್ಮೆಯ ಸಂಸ್ಥೆ ಎಂದು ತಿಳಿಸುತ್ತಾ, ಸೋಲೇ ಗೆಲುವಿನ ಸೋಪಾನ. ಸೋಲುವುದನ್ನು ನಾವು ಕಲಿಯಬೇಕು. ಆ ಸೋಲಿನಲ್ಲೂ ಜೀವನಾನುಭವ ಸಿಗುತ್ತದೆ ಎಂದು ಹೇಳಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಸ್ವಸ್ಥ ಮಂಡಳಿಯ ಸದಸ್ಯ ಡಾ.ಆಸೀಫ್ ಬ್ಯಾರಿ ಮಾತನಾಡಿ, ಪ್ರಯತ್ನಿಸಿದರೂ ಯಶಸ್ಸು ಕಾಣದವರು ನಿರಾಶರಾಗದೆ, ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲು ಉತ್ಸಾಹದಿಂದ ಭಾಗವಹಿಸಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಕ್ರೀಡೆಯಲ್ಲಿನ ಸಾಧನೆಯನ್ನು ಇಲ್ಲಿಗೇ ಮುಗಿಸದೆ ಸದಾ ಕ್ರಿಯಾಶೀಲರಾಗಿ ಇರಬೇಕು’ ಎಂದು ತಿಳಿಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಅಶ್ವಿನಿ ಶೆಟ್ಟಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಡೀನ್ ಅಕಾಡೆಮಿ ಡಾ.ಪೂರ್ಣಿಮಾ ಟಿ., ಬ್ಯಾರೀಸ್ ಡಿ.ಎಡ್. ಮತ್ತು ಬಿ.ಎಡ್ ಪ್ರಾಂಶುಪಾಲೆ ಡಾ.ಫಿರ್ದೋಸ್, ಹಾಜಿ ಕೆ.ಮೊಹಿದ್ದೀನ್ ಬ್ಯಾರಿ, ಅನುದಾನಿತ ಪ್ರೌಢಶಾಲೆಯ ಪ್ರಾಂಶುಪಾಲೆ ಡಾ.ಜಯಶೀಲ ಶೆಟ್ಟಿ. ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಟ್ಟಪ್ಪ, ಚಕ್ರೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲ ಪೂಜಾರಿ, ಸಂಸ್ಥೆಯ ಎಲ್ಲ ಉಪ ಪ್ರಾಂಶುಪಾಲರು, ಎಸ್‌ಡಿಎಂಸಿ ಹಾಗೂ ಪಿಟಿಎಯ ಎಲ್ಲಾ ಸದಸ್ಯರು, ಉಪನ್ಯಾಸಕರು, ಉಪನ್ಯಾಸಕೇತರರ ವೃಂದ, ವಿದ್ಯಾರ್ಥಿ ಸಮೂಹ ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ಸ್ವಾಗತಿಸಿದರು. ಬ್ಯಾರೀಸ್ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಸೌರಭ್ ವಂದಿಸಿದರು. ಬಿಎಡ್‌ನ ಪ್ರಶಿಕ್ಷಣಾರ್ಥಿ ಸ್ವಾತಿ ಹಾಗೂ ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಲುವಿಸ್ ಕಾರ್ಯಕ್ರಮ ನಿರೂಪಿಸಿದರು.