Kundapur | ಕಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆ
ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್ ಹಾಗು ಎಸ್‌ಸಿಐ ಕುಂದಾಪುರ ಲಿಜನ್ ವತಿಯಿಂದ ಕುಂದಾಪುರದ ರಿವರ್ ಲೌನ್ ರೆಸಾರ್ಟ್‌ನಲ್ಲಿ ಕಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರವನ್ನು ಎಸ್‌ಸಿಐ ಕುಂದಾಪುರ ಲಿಜನ್‌ನ ಸ್ಥಾಪಕ ಅಧ್ಯಕ್ಷ ಕೋಮೆ ಗೋಪಾಲ ಪೂಜಾರಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್‌ನ ಅಧ್ಯಕ್ಷ ಹುಸೇನ್ ಹೈಕಾಡಿ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಸಿಐ ಸಂಯೋಜಕ ಶಿವಾನಂದ ಎಂ.ಪಿ., ಲಯನ್ಸ್ ಕ್ಲಬ್ ಕೋಟೇಶ್ವರದ ಖಜಾಂಚಿ ಮಂಜುನಾಥ್ ಕಾಮತ್, ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್ ನಿಕಟಪೂರ್ವ ಅಧ್ಯಕ್ಷ ವಿಜಯ ಭಂಡಾರಿ, ಸದಸ್ಯ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಎಸ್‌ಸಿಐ ಕುಂದಾಪುರ ಲಿಜನ್‌ನ ಪೂರ್ವ ಅಧ್ಯಕ್ಷ ರಮೇಶ್ ದೇವಾಡಿಗ, ಪ್ರಕಾಶ್ ಮಂಡ್ಯ ರಾಘವೇಂದ್ರ ಚರಣ್ ನಾವಡ, ಸದ್ಯಸ್ಯರಾದ ರಾಧಾಕೃಷ್ಣ ದಿನೇಶ್ ಗೋಡೆ, ಚಂದ್ರ ಇಂಬಾಳಿ, ನವೀನ್ ಶೇಟ್ ಕುಂದಾಪುರ, ಅಜಿತ್ ಕೋಟ, ಸತೀಶ್, ಗಂಗಾಧರ್, ಸಂತೋಷ ಕುಂದೇಶ್ವರ, ಪ್ರಭಾಕರ ಮೊದಲಾದವರು ಉಪಸ್ಥಿತರಿದ್ದರು.
ಎಸ್‌ಸಿಐ ಕುಂದಾಪುರ ಲಿಜನ್‌ನ ಅಧ್ಯಕ್ಷ ಶ್ರೀನಿವಾಸ್ ಸ್ವಾಗತಿಸಿದರು. ಕುಂದಾಪುರ ಲಿಜನ್‌ನ ಕಾರ್ಯದರ್ಶಿ ನಾಗೇಶ್ ನಾವಡ ವಂದಿಸಿದರು.