Karkala | ದಿ. ಎಂ.ಕೆ.ವಿಜಯ್ ಕುಮಾರ್ ಸ್ಮರಣಾರ್ಥ ಬಸ್ ತಂಗುದಾಣಗಳ ಸ್ವಚ್ಛತಾ ಕಾರ್ಯ
ಕಾರ್ಕಳ: ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಕಾರ್ಕಳ, ಸಾರ್ವಜನಿಕ ಹಿಂದೂ ರುದ್ರಭೂಮಿ ವ್ಯವಸ್ಥಾಪನಾ ಸಮಿತಿ ಕರಿಯಕಲ್ಲು ಕಾರ್ಕಳ ಹಾಗೂ ಪಲ್ಲವಿ ಡೆಕೋರೇಟರ್ಸ್ ಕಾಳಿಕಾಂಬ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ದಿ. ಎಂ.ಕೆ. ವಿಜಯ್ ಕುಮಾರ್ ಅವರ ಪ್ರಥಮ ವರ್ಷದ ಸ್ಮರಣಾರ್ಥ ಕಾರ್ಕಳ ನಗರದ ವಿವಿಧ ಬಸ್ ಪ್ರಯಾಣಿಕರ ತಂಗುದಾಣಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ನಡೆಯಿತು.
ಉದ್ಯಮಿ ಟಿ.ರಾಮಚಂದ್ರ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದಿ. ಎಂ.ಕೆ. ವಿಜಯ್ ಕುಮಾರ್ ಅವರು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಕ್ರೀಡಾ ಹಾಗೂ ನ್ಯಾಯಾಂಗ ಕ್ಷೇತ್ರಗಳಲ್ಲಿಯೂ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸೇವೆ ಮತ್ತು ಕೊಡುಗೆಗಳನ್ನು ಕ್ಷೇತ್ರದ ಜನತೆ ಸದಾ ಸ್ಮರಿಸಬೇಕು ಎಂದರು.
ನಗರದ ಆನೆಕೆರೆ, ಕುಂಟಲ್ಪಾಡಿ, ಪುಲ್ಕೇರಿ ಬೈಪಾಸ್, ಜೋಡುಕಟ್ಟೆ, ದಾನಶಾಲೆ, ಅನಂತಶಯನ, ಎಸ್.ವಿ.ಟಿ. ವೃತ್ತ, ಬಂಡಿಮಠ, ಸರ್ವಜ್ಞ ವೃತ್ತ, ಕಾಬೆಟ್ಟು ಸೇರಿದಂತೆ ವಿವಿಧೆಡೆಗಳಲ್ಲಿರುವ ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು.
ಈ ವೇಳೆ ಉದ್ಯಮಿ ಚಂದ್ರಶೇಖರ ಹೆಗ್ಡೆ, ನ್ಯಾಯವಾದಿ ರವೀಂದ್ರ ಮೊಯ್ಲಿ, ಪುರಸಭೆಯ ಆರೋಗ್ಯ ಅಧಿಕಾರಿ ಲೈಲಾ ಥೋಮಸ್, ಉದ್ಯಮಿ ಸುರೇಶ್ ಕೋಟ್ಯಾನ್, ಹಿಂದೂ ರುದ್ರಭೂಮಿ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಪ್ರಕಾಶ್ ರಾವ್, ಮರಾಠ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ರಾವ್, ರವೀಂದ್ರ ರಾವ್, ಹರಿಶ್ಚಂದ್ರ ರಾವ್, ಸತೀಶ್ ರಾವ್, ರಮೇಶ್ ಪೂಜಾರಿ, ಧೀರಜ್ ರಾವ್, ಕಾರ್ತಿಕ್ ರಾವ್, ಪದ್ಮಾಕರ ದೇವಾಡಿಗ, ವಿನೀತ್, ಆದಿತ್ಯ ರಾವ್, ವಿಘ್ನೇಶ್ ರಾವ್ ಓಂಕಾರ್, ನಿಖಿಲ್ ರಾವ್, ವಿಘ್ನೇಶ್ ರಾವ್, ವಿಜೇತ್ ರಾವ್, ನೀಲ್, ಕಿಯಾನ್, ಪ್ರಣೀತ್ ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.