ಕುಂದಾಪುರ: ಬಾವಿಯ ಪಂಪ್ ದುರಸ್ತಿಗೆ ಇಳಿದ ವ್ಯಕ್ತಿ ನೀರಿಗೆ ಬಿದ್ದು ಮೃತ್ಯು
Update: 2026-01-31 14:12 IST
ಕುಂದಾಪುರ, ಜ.31: ಪಂಪ್ ದುರಸ್ತಿಗಾಗಿ ಬಾವಿಗೆ ಇಳಿದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಡೇರ ಹೊಬಳಿ ಗ್ರಾಮದ ಬಿಸಿ ರೋಡ್ ಎಂಬಲ್ಲಿ ಜ.30ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ವಡೇರ ಹೊಬಳಿ ಗ್ರಾಮದ ಬಿ.ಸಿ.ರೋಡ್ ನಿವಾಸಿ ನಾಗರಾಜ (51) ಎಂದು ಗುರುತಿಸಲಾಗಿದೆ. ಇವರು ಮನೆಯ ಬಾವಿಯೊಳಗಿನ ಸಬ್ ಮರ್ಸಿಬಲ್ ಪಂಪ್‌ನ್ನು ರಿಪೇರಿ ಮಾಡಲು ಇಳಿದಿದ್ದು, ಆಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.