×
Ad

ಕೇಂದ್ರದಿಂದ ಗಾಂಧಿ ಹೆಸರು ಅಳಿಸುವ ಹುನ್ನಾರ: ಜಯಪ್ರಕಾಶ್ ಹೆಗ್ಡೆ

Update: 2026-01-30 21:17 IST

ಬ್ರಹ್ಮಾವರ, ಜ.30: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನರೇಗಾ ಯೋಜನೆಯ ಹೆಸರಿನಲ್ಲಿ ಬದಲಾ ವಣೆ ಮಾಡುವುದರ ಮೂಲಕ ಮಹಾತ್ಮಾ ಗಾಂಧಿಯವರ ಹೆಸರನ್ನು ನಿಧಾನವಾಗಿ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಆಶ್ರಯದಲ್ಲಿ ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಮನ್ ರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಪ್ರತಿಯೊಬ್ಬ ವ್ಯಕ್ತಿಗೆ ನೂರು ದಿನಗಳ ಉದ್ಯೋಗ ಲಭಿಸಬೇಕು ಎನ್ನುವ ಉದ್ಧೇಶದಿಂದ ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇದನ್ನು ಹಂತಹಂತವಾಗಿ ಯೋಜನೆಯನ್ನು ನಿಲ್ಲಿಸುವ ಹುನ್ನಾರವನ್ನು ಕೇಂದ್ರ ಸರಕಾರ ಹೊಂದಿದೆ. ಇಷ್ಟೊಂದು ಒಳ್ಳೆಯ ಯೋಜನೆಯನ್ನು ಮಹಾತ್ಮಗಾಂಧಿ ಯೋಜನೆಗೆ ರಾಮ ಹೆಸರು ಇಡುವ ಬದಲು ರಾಮನ ಹೆಸರಿನಲ್ಲೆ ಹೊಸತಾದ ಯೋಜನೆಯನ್ನು ಪ್ರತಿಯೊಬ್ಬರೂ ಒಪ್ಪುತ್ತಿದ್ದೇವು ಎಂದರು.

ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್‌ಕಾಂಚನ್ ಮಾತನಾಡಿ, ದೇಶದ ಕಟ್ಟ ಕಡೆಯ ವ್ಯಕ್ತಿಯೂ ಕೂಡ ಉತ್ತಮ ವಾಗಿ ಬದುಕಬೇಕು ಎನ್ನುವ ಉದ್ದೇಶದಿಂದ 2005ರಲ್ಲಿ ಮನಮೋಹನ್ ಸಿಂಗ್, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದರು. ದೇಶದ ಬಡ ಜನರ ಹಸಿವು ನೀಗಿಸಲು ಈ ಯೋಜನೆ ಸಹಕಾರಿ ಯಾಗಿತ್ತು. ದೇಶದಲ್ಲಿ ಬಡಜನರು ಉದ್ದಾರವಾಗದೆ ಶ್ರೀಮಂತರೇ ಬೆಳೆಯಬೇಕು ಎನ್ನುವ ಆರ್‌ಎಸ್‌ಎಸ್ ತತ್ವವನ್ನು ಬಿಜೆಪಿ ಸರಕಾರ ಕಾರ್ಯರೂಪಕ್ಕೆ ತರಲು ಹೊರಟಿದೆ. ಬಡವರನ್ನು ತುಳಿಯಲು ಪ್ರತಯ್ನಿಸಿದರೆ ಕಾಂಗ್ರೆಸ್ ಪಕ್ಷ ಸುಮ್ಮನೆ ಕೂತು ನೋಡಲ್ಲ, ಬದಲಾಗಿ ಉಗ್ರ ಪ್ರತಿಭಟನೆ ನಡಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳಕೆಬೈಲ್, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮುಖಂಡರಾದ ವೆರೋನಿಕಾ ಕರ್ನೆಲಿಯೋ, ರಾಘವೇಂದ್ರ ಶೆಟ್ಟಿ, ಭುಜಂಗ ಶೆಟ್ಟಿ, ರೋಶನ್ ಶೆಟ್ಟಿ, ಡಾ. ಸುನೀತಾ ಶೆಟ್ಟಿ, ಪ್ರಶಾಂತ್ ಪೂಜಾರಿ, ಸಜ್ಜನ್ ಶೆಟ್ಟಿ, ಅಮೃತ್ ಶೆಣೈ, ದಿನಕರ ಹೇರೂರು, ಮುರಳಿ ಶೆಟ್ಟಿ, ಯತೀಶ್ ಕರ್ಕೇರಾ, ಕೀರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನೆಗೆ ಮುನ್ನ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಆಕಾಶವಾಣಿ ಸರ್ಕಲ್ ಮಾರ್ಗವಾಗಿ ಹೊರಟು ರಥಬೀದಿ ರಸ್ತೆಯ ಮೂಲಕ ಬಸ್ ನಿಲ್ದಾಣದ ತನಕ ಪಾದಯಾತ್ರೆಯನ್ನು ನಡೆಸಲಾಯಿತು.

‘ಕೇವಲ ಭಾಷಣಗಳನ್ನು ಮಾಡುವ ಬದಲು ಈ ಯೋಜನೆಯನ್ನು ಅಳಿಸಿ ಹಾಕುತ್ತಿರುವ ಕುರಿತು ಹಳ್ಳಿ ಹಳ್ಳಿಗಳಲ್ಲಿ ಚರ್ಚೆ ನಡೆಯಬೇಕು. ಬಿಜೆಪಿಗರು ಮಹಾತ್ಮಗಾಂಧಿಯವರ ಹೆಸರನ್ನಷ್ಟೇ ಬದಲಾಯಿಸಬಹುದು ಆದರೆ ಜನರ ಮನಸ್ಸಿನಿಂದ ಅವರನ್ನು ಅಳಿಸಲು ಸಾಧ್ಯವಿಲ್ಲ. ವಿಶೇಷ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯ ಹೆಸರನ್ನು ಬದಲಿಸಲು ಹೊರಟಿರುವ ಬಿಜೆಪಿಗರ ನಿರ್ಧಾರ ಖಂಡನೀಯ’

-ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News