×
Ad

ಕುಂದಾಪುರ: ಕೂಲಿ ಹಣದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದ ಗ್ರಾಪಂ ಸದಸ್ಯೆ!

Update: 2023-10-02 19:32 IST

ಕುಂದಾಪುರ, ಅ.2: ಬಿಜೆಪಿ ಹೇರಿಕುದ್ರು ಘಟಕದಿಂದ ಗಾಂಧಿ ಜಯಂತಿ ಅಂಗವಾಗಿ ಹೆರಿಕುದ್ರು ಪರಿಸರದಲ್ಲಿ ಸೋಮವಾರ ನಡೆದ ಸ್ವಚ್ಚತಾ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಆನಗಳ್ಳಿ ಗ್ರಾಪಂನ ಒಂದನೇ ವಾರ್ಡ್‌ನ ಸದಸ್ಯೆ ನಿರ್ಮಲಾ ತಾನು ಕೂಲಿ ಮಾಡಿ ಸಂಪಾದಿಸಿದ ಹಣದಿಂದ ಸ್ವಚ್ಚತಾ ಕೆಲಸ ನಿರ್ವಹಿಸುವ ಮೂಲಕ ಮಾದರಿಯಾದರು.

ತಾಪಂ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ ಹೇರಿಕುದ್ರು ಮಾತನಾಡಿದರು. ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಕಳಿಂಜೆ, ಜಿಲ್ಲಾ ವೃತ್ತಿಪರ ಪ್ರಕೊಷ್ಟದ ರಾಘವೇಂದ್ರ ಗಾಣಿಗ, ಬಿಜೆಪಿ ಆನಗಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸುನೀಲ್ ಶೆಟ್ಟಿ, ಮುಖಂಡರಾದ ಮಹಾಬಲ ಪೂಜಾರಿ, ನಾರಾಯಣ ಬಿಲ್ಲವ, ಮಹೇಂದ್ರ ಹೆಗ್ಡೆ, ಲಕ್ಷ್ಮಣ ಶೆಟ್ಟಿ, ಸಚಿನ್, ಸುಜಯ್ ಪೂಜಾರಿ ಮೊದಲಾದ ವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News