ಕುಂದಾಪುರ : ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಿ.ಆರ್.ಸಿ.ಎಫ್.ವಿ.ಯಲ್ಲಿ ಮೀನುಗಾರಿಕಾ ಗ್ರಾಮವಾಗಿ ಆಯ್ಕೆಯಾದ ಕೋಟೇಶ್ವರದ ಗ್ರಾ.ಪಂ. ವ್ಯಾಪ್ತಿಯ ಕೋಟೇಶ್ವರದಲ್ಲಿ ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ಮೀನು ಮಾರಾಟ ಕೇಂದ್ರ ನವೀಕರಿಸಿದ್ದು, 81 ಲಕ್ಷ ರೂ. ನಲ್ಲಿ ಇತರೆ ಕಾಮಗಾರಿಗಳು ಗ್ರಾ.ಪಂ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಸಂಬಂದಿಸಿದಂತೆ ಅನುಷ್ಠಾನಗೊಳ್ಳಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

2024-25ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯ ’ಕ್ಲೈಮೇಟ್ ರೆಸಿಲಿಯಂಟ್ ಕೋಸ್ಟಲ್ ಫಿಶರೀಸ್ ವಿಲೇಜ್’ ಕಾರ್ಯಕ್ರಮದಡಿ ನವೀಕರಣಗೊಂಡ ಕೋಟೇಶ್ವರ ಮೀನು ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.

ಕುಂದಾಪುರ ಶಾಸಕ ಎ.ಕಿರಣ್ ಕುರ್ಮಾ ಕೊಡ್ಗಿ ಮಾತನಾಡಿ, ಕೇಂದ್ರ ಸರಕಾರದ ಮತ್ಸ್ಯ ಸಂಪದ ಯೋಜನೆಯಡಿ ’ಕೋಸ್ಟಲ್ ವಿಲೇಜ್’ ಕಾರ್ಯಕ್ರಮದಡಿ ಕೋಟೇಶ್ವರ ಗ್ರಾ.ಪಂ. ಆಯ್ಕೆಯಾಗಿದ್ದು 1.25 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಕೋಟೇಶ್ವರ ಮೀನು ಮಾರುಕಟ್ಟೆ ನವೀಕರಣಗೊಳಿಸಿ ಮೀನುಗಾರರ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ. ಕೋಡಿ ಸಮುದ್ರ ಭಾಗದಲ್ಲಿ ತಡೆಗೋಡೆ ನಿರ್ಮಾಣ ಸಹಿತ ಮೀನುಗಾರ ಮಹಿಳೆಯರಿಗೆ ಅಗತ್ಯವಿರುವ ವಿವಿಧ ಉಪಕರಣ ಪೂರೈಸುವ ಇರಾದೆ ಈ ಯೋಜನೆಯಲ್ಲಿದೆ ಎಂದರು.

ಕುಂದಾಪುರ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಆಶಾ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಮಾಜಿ ಜಿ.ಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಗುತ್ತಿಗೆದಾರರಾದ ಪ್ರತಾಪಚಂದ್ರ ಹೆಗ್ಡೆ ಮೊಳಹಳ್ಳಿ, ರಾಜೇಶ ಉಡುಪ, ಸಂಪತ್ ಕುರ್ಮಾ ಶೆಟ್ಟಿ ಶಾನಾಡಿ, ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರಮೇಶ್ ಕಾಂಚನ್, ಕೋಟೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಮಾಜಿ ಉಪಾಧ್ಯಕ್ಷೆ ಆಶಾ ವಿ.ಶೇರಿಗಾರ್, ಮಾಜಿ ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ಸುರೇಶ ದೇವಾಡಿಗ, ಚಂದ್ರಮೋಹನ್, ರಾಘವೇಂದ್ರ ಪೂಜಾರಿ, ವಿವೇಕ ದೇವಾಡಿಗ, ವಿಶಾಲಾಕ್ಷಿ ಶೆಟ್ಟಿಗಾರ್, ಪುಟ್ಟಿ, ಆಶಾ ಜಿ. ಕುಂದರ್, ಪ್ರಮುಖರಾದ ಶಂಕರ ಅಂಕದಕಟ್ಟೆ, ಭಾಸ್ಕರ ಕುಂಬ್ರಿ, ಶೇಖರ್ ಮೊಗವೀರ ಅಂಕದಕಟ್ಟೆ, ಶ್ರೀನಾಥ್ ತೆಕ್ಕಟ್ಟೆ, ಹಿರಿಯ ಮೀನುಗಾರ ಮಹಿಳೆ ರತ್ನಾ ಮೊದಲಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor