×
Ad

ಕುಂದಾಪುರ | ’ಅವೇಕೆನ್ ದಿ ಸೂಪರ್ ಹೀರೋ ಇನ್ ಯು’ ಕುರಿತು ಕಾರ್ಯಗಾರ

Update: 2025-12-22 16:52 IST

ಕುಂದಾಪುರ, ಡಿ.22: ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ’ಅವೇಕೆನ್ ದಿ ಸೂಪರ್ ಹೀರೋ ಇನ್ ಯು’ ಎಂಬ ವಿಷಯದ ಬಗ್ಗೆ ಕಾರ್ಯಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಸೇಲ್ಸ್ ಸ್ಟ್ರೈಟೆಜಿಕ್ ಕನ್ಸಲ್ಟೆಂಟ್ ಅಂಡ್ ಮೆಂಟರ್ ಟು ಸ್ಟಾರ್ಟ್ ಅಪ್ ರಮಣಿ ವೆಂಕಟ್ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಒಬ್ಬೊಬ್ಬ ಸೂಪರ್ ಹೀರೋ ಇರುತ್ತಾನೆ. ಆದರೆ ಅದು ವಿದ್ಯಾರ್ಥಿಗಳಿಗೆ ತಿಳಿಯದೆ ನಾವು ಯಾರಿಗೂ ಸಮರಲ್ಲ ಎಂಬ ಋಣಾತ್ಮಕ ಆಲೋಚನೆಯಲ್ಲಿ ವಿದ್ಯಾರ್ಥಿಗಳು ಇರುತ್ತಾರೆ ಎಂದರು.

ಇವರು ವಿದ್ಯಾರ್ಥಿಗಳಿಗೆ ವಿವಿಧ ನೈಜ ಅನುಭವಗಳನ್ನು ನೀಡುವುದರ ಮೂಲಕ ಅದಕ್ಕೆ ಹೇಗೆ ಪ್ರತಿಕ್ರಿಸುತ್ತಾರೆ ಮತ್ತು ವಿದ್ಯಾರ್ಥಿಗಳು ಮಾಡುವ ತಪ್ಪುಗಳೇನು ಮತ್ತು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಾಗಾರವನ್ನು ಕಾಲೇಜಿನ ನಿರ್ದೇಶಕ ಡಾ.ಎಸ್.ಎನ್.ಭಟ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ ಮಾತನಾಡಿದರು. ಎಂಬಿಎ ವಿಭಾಗದ ಮುಖ್ಯಸ್ಥೆ ಡಾ.ಸುಚಿತ್ರಾ ಪೂಜಾರಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಶಾಂಭವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News