×
Ad

ದ್ವೇಷ ಬಿಟ್ಟು ದೇಶ ಕಟ್ಟಿ ‘ಪ್ರಜಾಭಾರತ’ ಕಾರ್ಯಕ್ರಮ

Update: 2023-08-28 20:26 IST

ಬ್ರಹ್ಮಾವರ, ಆ.28: ಕರ್ನಾಟಕ ಮುಸ್ಲಿಂ ಜಮಾಅತ್ ಬ್ರಹ್ಮಾವರ ವಲಯ ಸಮಿತಿಯ ವತಿಯಿಂದ ದ್ವೇಷ ಬಿಟ್ಟು ದೇಶ ಕಟ್ಟು ಎಂಬ ಘೋಷ ವಾಕ್ಯದೂಂದಿಗೆ ಪ್ರಜಾಭಾರತ ಕಾರ್ಯಕ್ರಮವನ್ನು ಬ್ರಹ್ಮಾವರದ ಆಶ್ರಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಸೋಮನಾಥ ಹೆಗ್ಡೆ ಮಾತನಾಡಿ, ಭಾರತ ಸೌಹಾರ್ದತೆಯ ನೆಲೆಯಾಗಿದೆ. ಇಲ್ಲಿ ವಾಸಿಸುವ ಸರ್ವರೂ ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಬದುಕಿ ತಮ್ಮಳೂಗಿನ ದ್ವೇಶವನ್ನು ಬಿಟ್ಟು ಈ ದೇಶವನ್ನು ಕಟ್ಟಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಸಮಿತಿಯ ಕಾರ್ಯದರ್ಶಿ ಇಸ್ಮಾಯಿಲ್ ಕೋಡಿ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ವಕೀಲ ಇಲ್ಯಾಸ್ ನಾವುಂದ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ರಾಮಚಂದ್ರ ಕಾಂಚನ್ ಹೊನ್ನಾಳ ಹಾಗೂ ಅಬ್ದುಲ್ ಸಲೀಮ್ ಮಟಪಾಡಿ ಅವರನ್ನು ಸನ್ಮಾನಿಸಲಾಯಿತು.

ವಲಯ ಅಧ್ಯಕ್ಷ ಜೆ.ಮುಷ್ತಾಕ್ ಅಹ್ಮದ್ ಹೊನ್ನಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜಾರಾಮ್ ಶೆಟ್ಟಿ ಬ್ರಹ್ಮಾವರ, ಕೋಟಿ ಪೂಜಾರಿ ಮಧುವನ, ನಾಗರಾಜ್ ಶೆಟ್ಟಿ ಹೊನ್ನಾಳ, ಹಾಜಿ ಸಾಹೇಬ್ ಮಧುವನ, ಇಸ್ಮಾಯಿಲ್ ಪಡುಕೆರೆ, ಅಬ್ದುರ‌್ರಹ್ಮಾನ್ ಪಡುಕೆರೆ, ನಾಸಿರ್ ಕೋಡಿಕನ್ಯಾನ, ಅಶ್ರಫ್ ಹೂಡೆ, ವಿಶ್ವನಾಥ್ ಶೆಟ್ಟಿ ಮಟಪಾಡಿ, ನಜೀರ್ ಸಾಹೇಬ್ ಬ್ರಹ್ಮಾವರ, ಶೌಕತಲಿ ಬಾರಕೂರು, ಜಮಾಲ್ ಸಾಹೇಬ್ ಬ್ರಹ್ಮಾವರ, ಗಣೇಶ್ ಶೆಟ್ಟಿ ಹೊನ್ನಾಳ, ಚಂದ್ರ ಶೇಖರ್ ಶೆಟ್ಟಿ ಹೊನ್ನಾಳ, ಚಂದ್ರ ಶೆಟ್ಟಿ ಮಧುವನ, ರಿತೇಶ್ ಹೊನ್ನಾಳ, ದಿನೇಶ್ ಹೊನ್ನಾಳ, ಲಕ್ಷಣ ಶೆಟ್ಟಿ ಮಧುವನ, ಅಝ್ಮಲ್ ಅಸ್ಸಾದಿ ಬ್ರಹ್ಮಾವರ, ಬಿ.ಎನ್.ಶಬ್ಬಿರ್ ಉಡುಪಿ, ಮುಷ್ತಾಕ್ ಉಪ್ಪಿನಕೋಟೆ, ಎಂ.ಕೆ. ಮುಹಮ್ಮದ್ ಮಧುವನ, ಮುಹಮ್ಮದ್ ಅಲ್ತಾಫ್ ಮಟಪಾಡಿ, ಗುರುಚರಣ್ ಶೆಟ್ಟಿ ಹೊನ್ನಾಳ, ಉಮರುಲ್ ಫಾರೂಕ್ ರಂಗನಕೆರೆ, ಹುಸೈನ್ ಪಡುಕೆರೆ, ಜಮಾಲ್ ಮಧುವನ, ಇಮ್ರಾನ್ ಹೊನ್ನಾಳ, ಹಮೀದ್ ಸೈಯದ್ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಇಬ್ರಾಹಿಂ ಆದಂ ಮಟಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News