ಷೇರ್ ಮಾರ್ಕೆಟ್‌ನಲ್ಲಿ ಹೂಡಿಕೆಗೆ ಆಮಿಷ: ಅಂಕೌಟೆಂಟ್‌ಗೆ 71.74 ಲಕ್ಷ ರೂ. ಪಂಗನಾಮ
ಉಡುಪಿ: ಷೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ಪಡೆಯಬಹುದು ಎಂದು ಆಮಿಷವೊಡ್ಡಿ ಸಿಂಗಾಪುರದಲ್ಲಿ ಅಕೌಂಟೆಂಟ್ ಆಗಿರುವ ವ್ಯಕ್ತಿಯೊಬ್ಬರಿಗೆ ಬರೋಬರಿ 71.74 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣವೊಂದು ಉಡುಪಿಯ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಿಂಗಾಪುರದಲ್ಲಿ ಅಕೌಟೆಂಟ್ ಆಗಿರುವ ಮಹೇಶ್ ಶೆಟ್ಟಿಗಾರ್ ಎಂಬವರಿಗೆ ಜ.3ರಂದು ಒಮ್ಮಿಫಿಕ್ಸ್‌ಪ್ರೊ ಎಂಬ ಹೆಸರಿನಲ್ಲಿ ವಾಟ್ಸಪ್ ಮೂಲಕ ಸಂದೇಶವೊಂದು ಬಂದಿದ್ದು, ಅದರಲ್ಲಿ ಷೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ದರೆ ಅಧಿಕ ಲಾಭಾಂಶ ಕೊಡಿಸುವುದಾಗಿ ನಂಬಿಸಲಾಗಿತ್ತು. ಅದರಂತೆ ಮಹೇಶ್ ಅವರು ವಾಟ್ಸಪ್ ಬಳಕೆದಾರ ತಿಳಿಸಿದಂತೆ ಆತ ವಾಟ್ಸಾಪ್ ಮೂಲಕ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜ.4ರಿಂದ 18ರವರೆಗೆ ಒಟ್ಟು 71.74 ಲಕ್ಷ ರೂ. ಹಣವನ್ನು ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಶಾಖೆಯ ಖಾತೆಯ ಮೂಲಕ ಕಳುಹಿಸಿದ್ದರು.
ಆದರೆ ಈವರೆಗೆ ಹೂಡಿಕೆ ಮಾಡಿದ ಹಣವಾಗಲೀ, ಲಾಭಾಂಶವಾಗಲೀ ನೀಡದೇ ಮೋಸ ಮಾಡಿರುವುದಾಗಿ ಮಹೇಶ್ ಅವರ ಪತ್ನಿ ಯಶೋಧ ದೂರಿನಲ್ಲಿ ತಿಳಿಸಿದ್ದಾರೆ.