Malpe | ಕೊಲೆ ಬೆದರಿಕೆ: ದೂರು ಪ್ರತಿದೂರು ದಾಖಲು
ಮಲ್ಪೆ, ಜು.3: ವ್ಯಕ್ತಿಯೊಬ್ಬರಿಗೆ ಸ್ಕೂಟರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರು ತೋರಿಸಿ ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡವೂರು ಗ್ರಾಮದ ಸನತ್ ಸಾಲಿಯಾನ್ ಜೂ.26ರಂದು ಮಧ್ಯಾಹ್ನ ವೇಳೆ ಮಲ್ಪೆಯ ತರಕಾರಿ ಅಂಗಡಿಯಲ್ಲಿ ತರಕಾರಿ ತೆಗೆದುಕೊಂಡು ಹೋಗುವಾಗ ಕಿರಣ್ ಹಾಗೂ ಭವಿತ್ ಅಂಗಡಿಯ ಎದುರುಗಡೆ ಬಂದು ಬೊಬ್ಬೆ ಹಾಕಿ ಬೈದರೆನ್ನಲಾಗಿದೆ. ಈ ವೇಳೆ ಕಿರಣ್ ಸ್ಕೂಟರ್ ನಲ್ಲಿದ್ದ ತಲ್ವಾರನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಬಳಿಕ ಸಾರ್ವಜನಿಕರು ಒಟ್ಟಾಗುವುದನ್ನು ಗಮನಿಸಿ ಇಬ್ಬರು ಸ್ಕೂಟರ್ನಲ್ಲಿ ಪರಾರಿಯಾದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿದೂರು : ಮಲ್ಪೆಯ ಕಿರಣ್ ಪುತ್ರನ್ ಎಂಬವರು ಜೂ.26ರಂದು ಮಧ್ಯಾಹ್ನ ಮಲ್ಪೆಯ ತರಕಾರಿ ಅಂಗಡಿಯಲ್ಲಿ ನಿಂತಿದ್ದಾಗ ಸನತ್ ಸಾಲಿಯಾನ್ ಎಂಬಾತ ಬೈಕಿನಲ್ಲಿ ಬಂದು, ಬೈದು ತರಕಾರಿ ಅಂಗಡಿಯಲ್ಲಿದ್ದ ಚೂರಿಯನ್ನು ತೋರಿಸಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಮಲ್ಪೆ ಪೊಲೀಸ್ ಠಾಣೆ ದೂರು ದಾಖಲಾಗಿದೆ.