×
Ad

ಮಂಗಳೂರು ಜಂಕ್ಷನ್- ಸೂರತ್ ರೈಲಿನ ಸಂಚಾರ ಅವಧಿ ವಿಸ್ತರಣೆ

Update: 2026-01-05 20:19 IST

ಉಡುಪಿ, ಜ.5: ಗುಜರಾತ್‌ನ ಸೂರತ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ವಾರಕ್ಕೆರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸಂಚಾರ ಅವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಿ ಕೊಂಕಣ ರೈಲ್ವೆ ಸುತ್ತೋಲೆ ಹೊರಡಿಸಿದೆ.

ರೈಲು ನಂ.09057/09058 ಸೂರತ್- ಮಂಗಳೂರು ಜಂಕ್ಷನ್- ಸೂರತ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸಂಚಾರ ವನ್ನು ಜ.29ರವರೆಗೆ ವಿಸ್ತರಿಸ ಲಾಗಿದೆ. ಈ ರೈಲು ಸೂರತ್‌ನಿಂದ ಪ್ರತಿ ಬುಧವಾರ ಹಾಗೂ ರವಿವಾರಗಳಂದು ಹಾಗೂ ಮಂಗಳೂರು ಜಂಕ್ಷನ್‌ನಿಂದ ಗುರುವಾರ ಹಾಗೂ ಸೋಮವಾರಗಳಂದು ಹೊರಡಲಿದೆ.

ಈ ರೈಲು 20 ಬೋಗಿಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಟೂ ಟಯರ್ ಎಸಿ ಕೋಚ್-1, 3 ಟಯರ್ ಎಸಿ-10, ಸ್ಲೀಪರ್-5, ಜನರಲ್-2 ಹಾಗೂ ಎಸ್‌ಎಲ್‌ಆರ್‌ಡಿ-2 ಕೋಚ್‌ಗಳಾಗಿರುತ್ತವೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News