×
Ad

ಮಣಿಪಾಲ: 7 ಲಕ್ಷ ರೂ. ಮೊತ್ತದ ಚೆಕ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

Update: 2023-09-22 21:53 IST

ಮಣಿಪಾಲ, ಸೆ.22: ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟು ಹೋದ 7ಲಕ್ಷ ರೂ. ಮೊತ್ತದ ಚೆಕ್ ಹಾಗೂ ದಾಖಲೆ ಪತ್ರವನ್ನು ರಿಕ್ಷಾ ಚಾಲಕ ವಾರೀಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಕುಂದಾಪುರ ನಿವಾಸಿ ಅನಂತ ದೇವಾಡಿಗ ಎಂಬವರು ಸೆ.18ರಂದು ಮಣಿಪಾಲ ರಿಕ್ಷಾ ನಿಲ್ದಾಣದಿಂದ ಸತೀಶ್ ಎಂಬವರ ರಿಕ್ಷಾದಲ್ಲಿ ಮಣಿಪಾಲ ದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿದ್ದರು. ಈ ವೇಳೆ ಅವರು ತಮ್ಮ ಕೈಯಲ್ಲಿದ್ದ ಚೆಕ್ ಹಾಗೂ ದಾಖಲಾತಿಗಳನ್ನು ರಿಕ್ಷಾದಲ್ಲಿಯೇ ಬಿಟ್ಟು ಹೋಗಿದ್ದರು. ಬಾಡಿಗೆ ಮುಗಿಸಿ ಮಣಿಪಾಲಕ್ಕೆ ಬಂದ ರಿಕ್ಷಾದಲ್ಲಿ ದಾಖಲಾತಿ ಬಿಟ್ಟು ಹೋಗಿ ರುವುದು ಸತೀಶ್ ಅವರ ಗಮನಕ್ಕೆ ಬಂತು.

ಈ ವಿಚಾರವನ್ನು ಸತೀಶ್, ತಮ್ಮ ಸಂಘದ ಅಧ್ಯಕ್ಷ ವಿಜಯ್ ಪುತ್ರನ್ ಹಿರೇಬೆಟ್ಟು ಅವರಿಗೆ ತಿಳಿಸಿದರು. ಬಳಿಕ ವಾರೀಸುದಾರರನ್ನು ಪತ್ತೆ ಹಚ್ಚಲಾಯಿತು. ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಹಾಗೂ ಎಸ್ಸೈಗಳಾದ ಅಕ್ಷಯ ಕುಮಾರಿ, ರಾಘವೇಂದ್ರ ಹಾಗೂ ಮನೋಹರ್ ಕುಮಾರ್ ಮೂಲಕ ಚೆಕ್ ಹಾಗೂ ದಾಖಲಾತಿಗಳನ್ನು ಹಸ್ತಾಂತರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News