ಮಣಿಪಾಲ | ಅಂದರ್ ಬಾಹರ್: ಎಂಟು ಮಂದಿ ಬಂಧನ
Update: 2025-11-16 20:20 IST
ಮಣಿಪಾಲ, ನ.16: ಮನೋಳಿಗುಜ್ಜಿಬೆಟ್ಟು ಎಂಬಲ್ಲಿನ ಮನೆಯೊಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ನ.15ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ನವೀನ್(37), ಭಾಸ್ಕರ್(55), ಕೃಷ್ಣ(27), ಜಗದೀಶ, ಸಂತೋಷ್(42), ಶಂಕರ ಪೂಜಾರಿ(42), ಮಂಜುನಾಥ್(37) ಶಿವಯ್ಯ(36) ಬಂಧಿತ ಆರೋಪಿಗಳು.
ಬಂಧಿತರಿಂದ 1,02,060 ರೂ. ನಗದು, 7 ಮೊಬೈಲ್ ಫೋನ್ ಗಳು ಹಾಗೂ ಎರಡು ಬೈಕುಗಳು, ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.