ಮಣಿಪಾಲ | ಪರಸ್ಪರ ಹೊಡೆದಾಟ: ನಾಲ್ವರು ಆರೋಪಿಗಳು ಸೆರೆ
Update: 2025-11-10 20:54 IST
ಮಣಿಪಾಲ : ಕ್ಷುಲ್ಲಕ ಕಾರಣಕ್ಕಾಗಿ ಈಶ್ವರನಗರದ ಸಾರ್ವಜನಿಕ ಸ್ಥಳದಲ್ಲಿ ನ.8ರಂದು ರಾತ್ರಿ ಪರಸ್ಪರ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಅಮರ್ ಶೆಟ್ಟಿ, ಚಂದನ್ ಸಿ.ಸಾಲ್ಯಾನ್, ಧನುಷ್, ಅಜಯ್ ಬಂಧಿತ ಆರೋಪಿಗಳು. ಈಶ್ವರನಗರದ ಬಾರೊಂದರಲ್ಲಿ ಚಂದನ್, ಅಮರ್ ಶೆಟ್ಟಿ, ಧನುಷ್, ನಿತೇಶ್, ಸುಜನ್, ನಿನಾದ್ ಅಜಯ್ ಎಂಬವರು ಊಟ ಮಾಡುತ್ತಿದ್ದು, ಈ ವೇಳೆ ಚಂದನ್ ಕೈ ಅಮರ್ ಶೆಟ್ಟಿಯ ಮೈಗೆ ತಾಗಿದ ವಿಚಾರದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡು ಬೈದಾಡಿದ್ದರೆನ್ನಲಾಗಿದೆ.
ಈ ವೀಡಿಯೋ ಸಾಮಾಜಿಕ ಜಾಲ ತಾಣತಾಣಗಳಲ್ಲಿ ಹರಿದಾಡುತ್ತಿದ್ದು, ಈ ಘಟನೆಯ ಬಗ್ಗೆ ಎಎಸ್ಸೈ ಮೋಹನ್ ದಾಸ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.