ಮಣಿಪಾಲ, ಅ.4: ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬ್ಯಾಟರಿ ಚಾಲಿತ ವಾಹನ ಸೇವೆ ಮಾಡುವ ಇಂಡಿಯಾಂಟಾ ಇ ಮೊಬಿಲಿಟಿ ಕಂಪೆನಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಮೂರ್ತಿ ಜಿ.(29), ಆತ್ರಾಡಿಯ ಶಿವರಾಜ್ ನಾಯ್ಕ(30), ಚಿತ್ರದುರ್ಗ ಜಿಲ್ಲೆಯ ಸುದೀಪ್(30), ಮಂಜೇಶ್ವರದ ಜಿತೇಶ ಕಾಂಚನ್(29), ಬೆಳಗಾವಿಯ ಮುತ್ತಣ್ಣ ಅಢೀನವರ(32), ಬೆಳ್ತಂಗಡಿ ನಾವೂರಿನ ಎಂ.ಬಿ.ಅವಿನಾಶ್(24) ಬಂಧಿತ ಆರೋಪಿಗಳು.

ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಎ.1ರಿಂದ ಕಂಪನಿಗೆ ಬರಬೇಕಾದ ಪ್ರಯಾಣಿಕರ ಶುಲ್ಕವನ್ನು ನೀಡದೇ ಕಂಪನಿಯ ಕ್ಯೂರ್‌ ಕೋಡ್‌ ಬಳಸದೇ ವೈಯಕ್ತಿಕ ಮರ್ಚೆಂಟ್ ಕ್ಯೂರ್‌ ಕೋಡ್‌ ಬಳಸಿ ಪ್ರಾಯಾಣಿಕರ ಶುಲ್ಕವನ್ನು ಸಂಗ್ರಹಿಸಿದ್ದರು. ಹೀಗೆ ಇವರು ಕಂಪನಿಗೆ ಬರಬೇಕಾದ 12,00,000 ರೂ. ಹಣವನ್ನು ಮುತ್ತಣ್ಣ ಅದಿನವರ್ ಅವರ ಹೆಂಡತಿ ಐಶ್ವರ್ಯ ಮುತ್ತಣ್ಣ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಎಸಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಅ.2ರಂದು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ತನಿಖೆಯ ಬಗ್ಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor