ಮಣಿಪಾಲ ಕೆಎಂಸಿಯಿಂದ ಉಡುಪಿ ಪೊಲೀಸ್‌ಗೆ 45 ಹೆಲ್ತ್‌ಕಿಟ್ ಕೊಡುಗೆ
ಉಡುಪಿ, ಜು.17: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಸಮೂಹದ ವತಿಯಿಂದ 45 ಹೆಲ್ತ್ ಕಿಟ್‌ಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ಆಸ್ಪತ್ರೆ ಸಮೂಹದ ಈ ಹೆಲ್ತ್ ಕಿಟ್‌ಗಳನ್ನು ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆ, ಪೊಲೀಸ್ ವೃತ್ತ ಕಚೇರಿ, ಉಪ ವಿಭಾಗಧಿಕಾರಿಯವರ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿ (ಡಿಎಆರ್) ಹಾಗೂ ವಿಶೇಷ ಘಟಕಗಳಿಗೆ ಈ ಹೆಲ್ತ್ ಕಿಟ್ ವಿತರಿಸಲಾಯಿತು.
ಪ್ರತಿಯೊಂದು ಹೆಲ್ತ್ ಕಿಟ್‌ನಲ್ಲಿ ಒಂದು ರಕ್ತದೊತ್ತಡ ಪರೀಕ್ಷೆಯ ಡಿಜಿಟಲ್ ಮೆಷಿನ್, ಒಂದು ಡಿಜಿಟಲ್ ಶುಗರ್ ಚೆಕ್ಕಿಂಗ್ ಮೆಷಿನ್ (ಸ್ಟ್ರಿಪ್ಸ್ ಸೇರಿ), ಒಂದು ಡಿಜಿಟಲ್ ಥರ್ಮೊ ಮೀಟರ್ ಇರಲಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆಗೊಳಪಡಲು ಈ ಹೆಲ್ತ್ ಕಿಟ್ ಬಳಸಲಾಗುವುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.