×
Ad

ಮಣಿಪಾಲ: ಕೋಳಿ ಅಂಕಕ್ಕೆ ದಾಳಿ; ಗ್ರಾ.ಪಂ ಸದಸ್ಯ ಸಹಿತ 11 ಮಂದಿಯ ಬಂಧನ

Update: 2023-12-19 10:48 IST

ಸಾಂದರ್ಭಿಕ ಚಿತ್ರ Photo: freepik

ಮಣಿಪಾಲ, ಡಿ.19: ಹಿರೇಬೆಟ್ಟು ಗ್ರಾಮದ ದೂಮವತಿ ದೈವಸ್ಥಾನದ ಹತ್ತಿರ ಕಬ್ಯಾಡಿ ಕಂಬಳ ಗದ್ದೆಯ ಬಳಿ ಡಿ.18ರಂದು ಹಣವನ್ನು ಪಣವಾಗಿ ಇಟ್ಟು ಕೋಳಿಅಂಕ ನಡೆಸುತ್ತಿದ್ದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ಸಹಿತ ಒಟ್ಟು 11 ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

80 ಬಡಗಬೆಟ್ಟು ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ಶುಭಕರ ಶೆಟ್ಟಿ, ರಾಕೇಶ, ಉಮೇಶ, ವಿಘ್ನೇಶ, ವಿವೇಕ, ದಿನೇಶ, ರತ್ನಾಕರ, ವಿಠಲ, ರಾಜೇಶ, ಜಯ, ಸುಂದರ ಬಂಧಿತ ಆರೋಪಿಗಳು. ಮಣಿಪಾಲ ಎಸ್ಸೈ ರಾಘವೇಂದ್ರ ಸಿ. ನೇತೃತ್ವದ ತಂಡ ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ. ಇವರಿಂದ 5,450ರೂ. ಮೌಲ್ಯದ 10 ಹುಂಜ ಹಾಗೂ ಆಟಕ್ಕೆ ಬಳಸಿದ ನಗದು 2800ರೂ. ಮತ್ತು ಕೋಳಿ ಬಾಳ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News