×
Ad

ಮೀಫ್ ಉಡುಪಿ ಜಿಲ್ಲಾ ಘಟಕ ಉದ್ಘಾಟನೆ : ಶೈಕ್ಷಣಿಕ ತರಬೇತಿ ಕಾರ್ಯಕ್ರಮ

Update: 2025-12-04 19:49 IST

ಉಡುಪಿ, ಡಿ.4: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಉಡುಪಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರಿಗಾಗಿ ತರಬೇತಿ ಕಾರ್ಯಕ್ರಮವು ಗುರುವಾರ ಉದ್ಯಾವರದ ಎಂ.ಇ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.

ಮೀಫ್ ಉಡುಪಿ ಜಿಲ್ಲಾ ಘಟಕವನ್ನು ಉದ್ಯಾವರ ಹಲೀಮಾ ಸಾಬ್ಜು ಸಭಾಂಗಣದ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೀಫ್ ಉಡುಪಿ ಘಟಕ ಅಧ್ಯಕ್ಷ ಮುಹಮ್ಮದ್ ಮೌಲಾ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಮೀಫ್ ಕೇಂದ್ರ ವಲಯದ ಉಪಾಧ್ಯಕ್ಷ ಹಾಗೂ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ ಮಾತನಾಡಿ, “ಮೀಫ್ ಉಡುಪಿ ಘಟಕದ ಸ್ಥಾಪನೆಯೊಂದಿಗೆ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೊಸ ಶಕ್ತಿ ಮತ್ತು ದಿಕ್ಕು ದೊರೆಯಲಿದೆ ಎಂದು ಅಭಿಪ್ರಾಯ ಪಟ್ಟರು.

ಶಾಲಾ ನಿರ್ವಹಣಾ ಸಮಿತಿ ಸದಸ್ಯರು ಮತ್ತು ಮುಖ್ಯೋಪಾಧ್ಯಾಯರಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಾಯಕತ್ವ, ನಿರ್ವಹಣಾ ಕೌಶಲ್ಯ, ಆಧುನಿಕ ಶಾಲಾ ಆಡಳಿತ ಮತ್ತು ಗುಣಮಟ್ಟ ಸುಧಾರಣೆ ಕುರಿತಂತೆ ಪರಿಣಾಮಕಾರಿ ಅಧಿವೇಶನ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಪಿ.ಎ. ಶೈಕ್ಷಣಿಕ ಟ್ರಸ್ಟ್ ನ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಸಯ್ಯದ್ ಅಮೀನ್ ಅಹಮ್ಮದ್ ಮಾರ್ಗದರ್ಶನ ನೀಡಿದರು. ಇವರ ಪರಿಚಯವನ್ನು ಮೀಫ್ ಕೇಂದ್ರ ವಲಯ ಉಪಾಧ್ಯಕ್ಷ ಪರ್ವೇಜ್ ಅಲಿ ಮಾಡಿದರು.

ಮೀಫ್ ಉಡುಪಿಯ ಉಪಾಧ್ಯಕ್ಷ ಅಬ್ದುಲ್ ರಹೀಮನ್ ಕೋಡಿ, ಶೇಖಬ್ಬ ಹೆಜಮಾಡಿ, ಮೀಫ್ ಸೆಂಟ್ರಲ್ ಜೋನ್ ಕಾರ್ಯದರ್ಶಿಗಳಾದ ಅನ್ವರ್ ಹುಸೇನ್ ಗೂಡಿನಬಳಿ, ರಹಮತುಲ್ಲಾ ಬೂರೂಜ್, ಸದಸ್ಯ ಆದಿಲ್ ಸೂಪಿ ಮೊದಲಾದವರು ಉಪಸ್ಥಿತರಿದ್ದರು.

ಹಫೀಜ್ ಹಸನ್ ಉಡುಪಿ ಕುರಾನ್ ಪಠಿಸಿದರು. ಮೀಫ್ ಉಡುಪಿ ಘಟಕದ ಗೌರವಾಧ್ಯಕ್ಷ ಶಭೀ ಅಹ್ಮದ್ ಕಾಝಿ ಸ್ವಾಗತಿಸಿದರು. ಮೀಫ್ ಕೇಂದ್ರ ವಲಯ(ಮಂಗಳೂರು)ದ ಅಧ್ಯಕ್ಷ ಪಿ.ಮೂಸಬ್ಬಾ ಬ್ಯಾರಿ ಪ್ರಾಸ್ತಾವಿಕವಾಗಿ‌ ಮಾತನಾಡಿ, ಮೀಫ್‌ನ ಉದ್ದೇಶ, ಶಿಕ್ಷಣದತ್ತದ ದೃಷ್ಟಿಕೋನ ಹಾಗೂ ಮುಂದಿನ ಕಾರ್ಯಕ್ರಮಗಳನ್ನು ವಿವರಿಸಿದರು. ಮೀಫ್ ಉಡುಪಿ ಘಟಕ ಪ್ರಧಾನ ಕಾರ್ಯದರ್ಶಿ ಅಸ್ಸಾಂ ಹೈಕಾಡಿ ವಂದಿಸಿದರು. ಮೀಫ್ ಉಡುಪಿ ಜಿಲ್ಲಾ ಸಂಚಾಲಕ ಉಮರ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News