×
Ad

ಅಪ್ರಾಪ್ತ ಸ್ಕೂಟರ್ ಸವಾರಿ: ಮಾಲಕಿ ವಿರುದ್ಧ ಪ್ರಕರಣ

Update: 2026-02-03 22:09 IST

ಮಣಿಪಾಲ, ಫೆ.3: ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಸವಾರಿ ಮಾಡಲು ಸ್ಕೂಟರ್ ನೀಡಿದ ಮಾಲಕಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರ್ಕಳ ಜಂಕ್ಷನ್ ಬಳಿ ಫೆ.2ರಂದು ಸಂಜೆ ವೇಳೆ ಹೆರ್ಗಾ ಕಡೆಯಿಂದ ಪರ್ಕಳ ಕಡೆಗೆ ಅಡ್ಡಾದಿಡ್ಡಿಯಾಗಿ ಅಜಾಗರೂ ಕತೆಯಿಂದ ಸವಾರಿ ಮಾಡಿ ಕೊಂಡು ಬರುತ್ತಿದ್ದ ಸ್ಕೂಟರ್‌ನ್ನು ಮಣಿಪಾಲ ಪೊಲೀಸರು ನಿಲ್ಲಿಸಿದ್ದು, ಸ್ಕೂಟರ್ ಸವಾರಿ ಮಾಡಿದ ಬಾಲಕನ ಶ್ರೇಯಸ್(16) ಎಂದು ತಿಳಿದು ಬಂದಿದೆ.

ಅಪ್ರಾಪ್ತ ವಯಸ್ಕನಾಗಿರುವ ಶ್ರೇಯಸ್‌ಗೆ ಸೂಕ್ತ ಚಾಲನಾ ಅನುಜ್ಞಾ ಪತ್ರ ಇಲ್ಲದಿದ್ದರೂ ಆತನಿಗೆ ಸ್ಕೂಟರ್ ಸವಾರಿ ಮಾಡಲು ಸ್ಕೂಟರ್ ನೀಡಿದ ಮಾಲಕಿ ಉಷಾ(45) ವಿರುದ್ಧ ಕಾನೂನು ಕ್ರಮಕ್ಕಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News