×
Ad

ಮಹಿಳೆಯ ಚಿನ್ನದ ಸರ ಅಪಹರಣ: ಪ್ರಕರಣ ದಾಖಲು

Update: 2026-02-03 22:19 IST

ಗಂಗೊಳ್ಳಿ, ಫೆ.3: ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪರಿಚಿತರು ಅಪಹರಿಸಿ ಪರಾರಿಯಾಗಿರುವ ಘಟನೆ ತ್ರಾಸಿ ಗ್ರಾಮದ ಸಣ್ಣಕುಂಬ್ರಿ ಬಳಿ ಫೆ.3ರಂದು ಬೆಳಗ್ಗೆ ನಡೆದಿದೆ.

ತ್ರಾಸಿ ಕುಂಬಿ ನಿವಾಸಿ ಸೀತಾ(83) ಎಂಬವರು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದು, ಆಗ ಅಪರಿಚಿತ ವ್ಯಕ್ತಿ ಸೀತಾ ಅವರ ಹಿಂದಿನಿಂದ ಬಂದು ಜೀವ ಬೇದರಿಕೆ ಹಾಕಿ ಬಲಾತ್ಕಾರವಾಗಿ ಅವರ ಕುತ್ತಿಗೆಗೆ ಕೈ ಹಾಕಿ 22.470 ಗ್ರಾಂ ತೂಕದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿರುವುದಾಗಿ ದೂರ ಲಾಗದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News