ನಮ್ಮ ನಾಡ ಒಕ್ಕೂಟ ಕಾರ್ಕಳ ಅಧ್ಯಕ್ಷರಾಗಿ ಮುಸ್ತಫಾ ಆಯ್ಕೆ
ಮುಸ್ತಫಾ
ಕಾರ್ಕಳ, ಜ.23: ನಮ್ಮ ನಾಡ ಒಕ್ಕೂಟ ಕಾರ್ಕಳ ತಾಲೂಕು ಸಮಿತಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಕಾರ್ಕಳದ ಎನ್.ಎಸ್. ಅಕಾಡೆಮಿಯಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷ ಶಾಕಿರ್ ಶೀಶ್ ವಹಿಸಿದ್ದರು. ನೂತನ 2026- 27ನೇ ಸಾಲಿನ ಅಧ್ಯಕ್ಷರಾಗಿ ಮುಸ್ತಫಾ ಕಾರ್ಕಳ, ಉಪಾಧ್ಯಕ್ಷರಾಗಿ ರಹೀಮ್ ಭಕ್ಷ, ಅನೀಸ್ ಬೈಲೂರು, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಸಲೀಂ, ಜೊತೆ ಕಾರ್ಯದರ್ಶಿಯಾಗಿ ಮಫ್ರೋಜ್, ಕೋಶಾಧಿಕಾರಿಯಾಗಿ ಮೊಹಮ್ಮೆ ಹನೀಫ್, ಕ್ರೀಡಾ ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್, ಯುವ ಸಂಘಟಕರಾಗಿ ಅಬ್ದುಲ್ ಮನ್ನನ್, ಸಂಘಟನಾ ಕಾರ್ಯದರ್ಶಿಯಾಗಿ ಶಬ್ಬೀರ್ ಆಯ್ಕೆಯಾದರು.
ಒಕ್ಕೂಟದ ಜಿಲ್ಲಾಧ್ಯಕ್ಷ ನಕ್ವ ಯಹ್ಯ, ಮಾಜಿ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಚುನಾವಣಾ ಅಧಿಕಾರಿಗಳಾಗಿ ಮುನವಾರ್ ಅಜೆಕಾರು ಹಾಗೂ ನಜೀರ್ ನೇಜಾರು ನೇತೃತ್ವದಲ್ಲಿ ಚುನಾವಣೆ ನಡೆಯಿತು. ಶಬ್ಬೀರ್ ಅಹ್ಮದ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ರಫೀಕ್ ಸ್ವಾಗತಿಸಿ ವಂದಿಸಿದರು.