×
Ad

ಉಡುಪಿ| ಲೋಕಾಯುಕ್ತ ಹೆಸರಿನಲ್ಲಿ ನಗರಸಭೆ ಅಧಿಕಾರಿಗೆ ವಂಚಿಸಲು ಯತ್ನ: ಪ್ರಕರಣ ದಾಖಲು

Update: 2026-01-23 19:27 IST

ಉಡುಪಿ, ಜ23: ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ ಉಡುಪಿ ನಗರಸಭೆ ಅಧಿಕಾರಿಗೆ ವಂಚಿಸಲು ಯತ್ನಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಕಪಿಲ್‌ದೇವ್ ಎಸ್.ಗೋಡೆಮನೆ ಎಂಬವರಿಗೆ ಜ.19ರಂದು ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿಯು ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಚೆಲುವರಾಜ್ ಎಂದು ಹೇಳಿಕೊಂಡು ಕರೆ ಮಾಡಿದ್ದನು.

ನಿಮ್ಮ ವಿರುದ್ಧ ಇಮೇಲ್ ಮುಖಾಂತರ ದೂರು ಬಂದಿದ್ದು, ಈ ದೂರನ್ನು ಬಗೆಹರಿಸಿಕೊಳ್ಳಿ, ನಿರಾಕರಿಸಿದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಹಾಗೂ ಇಲಾಖಾ ವಿಚಾರಣೆ ಮಾಡುವುದಾಗಿ ಹೇಳಿದ್ದರು. ತದನಂತರ ಇನ್ನೊಬ್ಬ ವ್ಯಕ್ತಿಗೆ ಫೋನ್ ಕರೆ ಕೊಟ್ಟಿದ್ದು, ಆತನು ನಾನು ಇಲ್ಲಿ ಹಿರಿಯ ಅಧಿಕಾರಿಯಾಗಿದ್ದು, ಈಗಾಗಲೇ ನಮ್ಮ ಅಧಿಕಾರಿಯು ತಿಳಿಸಿದಂತೆ ನಡೆದುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ತಿಳಿಸಿದ್ದನು.

ಕಪಿಲ್‌ದೇವ್ ಈ ಬಗ್ಗೆ ಖಚಿತಪಡಿಸಿಕೊಳ್ಳಲು ಉಡುಪಿ ಲೋಕಯುಕ್ತ ಕಚೇರಿಗೆ ಹೋಗಿ ವಾಟ್ಸಾಪ್ ಮೂಲಕ ಕರೆ ಮಾಡಿದ್ದ ವ್ಯಕ್ತಿಗಳ ಬಗ್ಗೆ ವಿಚಾರಿಸಿದರು. ಆ ಹೆಸರಿನ ವ್ಯಕ್ತಿಗಳು ನಮ್ಮ ಕಚೇರಿಯಲಿಲ್ಲ ಹಾಗೂ ನಿಮಗೆ ಬಂದಂತಹ ಕರೆ ನಮ್ಮ ಕಚೇರಿಯಿಂದಲ್ಲ ಎಂದು ಲೋಕಾಯುಕ್ತ ಕಚೇರಿಯವರು ತಿಳಿಸಿದರು. ಆದುದರಿಂದ ಕರೆ ಮಾಡಿದ ವ್ಯಕ್ತಿಗಳು ವಂಚನೆ ಮಾಡಲು ಯತ್ನಿಸಿರುವುದು ತಿಳಿದುಬಂದಿದೆ. ಅದರಂತೆ ಕಪಿಲ್‌ದೇವ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News