×
Ad

ಕುಂದಾಪುರ ಹೋಲಿ ರೊಜರಿ ಚರ್ಚಿನಲ್ಲಿ ಹೊಸ ವರ್ಷಾಚರಣೆ

Update: 2026-01-01 20:06 IST

ಕುಂದಾಪುರ, ಜ.1: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2025ರ ಸಂಜೆ ಹೊಸ ವರ್ಷ 2026ರ ಪ್ರಯುಕ್ತ ಕುಂದಾಪುರ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಹೊಸ ವರ್ಷವನ್ನು ಆಚರಿಸಲಾಯಿತು.

ಬಲಿದಾನದ ನೇತೃತ್ವವನ್ನು ವಹಿಸಿಕೊಂಡ ತ್ರಾಸಿ ಡಾನ್ ಬಾಸ್ಕೊ ಸಂಸ್ಥೆಯ ಆಡಳಿತಗಾರ ಧರ್ಮಗುರು ವಂ.ಅರ್ನಾಲ್ಡ್ ಮಥಾಯಸ್, ನಮ್ಮ ಈ ಹೊಸ ವರ್ಷವನ್ನು ನಾವು ಮೇರಿ ಮಾತೆಗೆ ಸಮರ್ಪಿಸುತ್ತಿದ್ದೆವೆ. ಯೇಸು ಕ್ರಿಸ್ತರು ನಮಗೊಸ್ಕರ, ನಮ್ಮ ಮುಕ್ತಿಗೊಸ್ಕರ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದರು. ಅಂದರೆ ಯೇಸು ಕ್ರಿಸ್ತರು ದೈವತ್ಯ ಹಾಗೂ ಮನುಷತ್ವದ ಗುಣಗಳಿಂದ ವೀಶೆಷತ್ವವನ್ನು ಹೊಂದಿದವರಾಗಿದ್ದಾರೆ. ದೇವ ಪುತ್ರನಾದರೂ ಮಾತೆ ಮೇರಿಯ ಗರ್ಭದೊಳಗೆ ಮಾನವನಾಗಿ ಹುಟ್ಟಿದಕ್ಕೆ ಪವಿತ್ರ ಸಭೆಯು ಮೇರಿ ಮಾತೆ ಯೇಸುವಿನ ಮಾತೆ ಎಂದು ನಂಬುತ್ತದೆ. ಅದಕ್ಕಾಗಿ ಹೊಸ ವರ್ಷವನ್ನು ಮೇರಿ ಮಾತೆಗೆ ಸಮರ್ಪಿಸುತ್ತದೆ ಎಂದು ಸಂದೇಶ ನೀಡಿದರು.

ಪ್ರಧಾನ ಧರ್ಮಗುರು ಅ.ವಂ.ಪೌಲ್ ರೇಗೊ ಹೊಸ ವರ್ಷದ ಶುಭಾಷಯಗಳನ್ನು ಕೋರಿ, ಮೇರಿ ಮಾತೆ ನಮಗೊಂದು ಆಶೀರ್ವಾದ, ಅದರಂತೆ ನಾವು ಇತರರಿಗೆ ಆಶೀರ್ವದಾಗಳಾಗೋಣ ಎಂದು ತಿಳಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗ ಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News