ಕೊಂಕಣ ರೈಲ್ವೆ ಕನ್ನಡ ಅಭಿಮಾನಿ ಬಳಗದಿಂದ ಕನ್ನಡ ರಾಜ್ಯೋತ್ಸವ
ಉಡುಪಿ, ನ.27: ಕೊಂಕಣ ರೈಲ್ವೆ ಕನ್ನಡ ಅಭಿಮಾನಿಗಳ ಬಳಗ ಗೋವಾ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ- 2023ರ ಕಾರ್ಯಕ್ರಮ ಮಾಡ ಗಾವ್‌ನ ಕೊಂಕಣ ರೈಲ್ವೆ ಸಮುದಾಯ ಭವನದಲ್ಲಿ ನ.25ರಂದು ಜರಗಿತು.
ಕಾರ್ಯಕ್ರಮವನ್ನು ಗೋವಾ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾದ್ಯಾಪಕ ಡಾ.ಜಯರಾಮ್ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರನ್ನು ಸನ್ಮಾನಿಸಲಾಯಿತು. ಕೊಂಕಣ ರೈಲ್ವೆ ಅಧಿಕಾರಿ ಶಶಿಧರ್ ಜಿ. ಅಧ್ಯಕ್ಷತೆ ವಹಿಸಿದ್ದರು.
ಮಾದ ನಾಯಕ್ ಮತ್ತು ಗೋವಾ ಕನ್ನಡ ಸಂಘದ ಅಧ್ಯಕ್ಷ ಕೆ.ಮಲ್ಲಿಕಾರ್ಜುನಪ್ಪಮುಖ್ಯ ಅತಿಥಿಗಳಾಗಿದ್ದರು. ಕೊಂಕಣ ರೈಲ್ವೇ ಕನ್ನಡ ಅಭಿಮಾನಿಗಳ ಬಳಗದ ಅಧ್ಯಕ್ಷ ಡಿ.ಬಿ.ಗೋಪಿ, ಪ್ರಧಾನ ಕಾರ್ಯದರ್ಶಿ ಕೆ.ರವಿಕುಮಾರ್, ಖಚಾಂಚಿ ಶ್ರೀಧರ್ ಬಳ್ಳಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಮುಖರಾದ ಎಸ್.ಎನ್.ಶೆಟ್ಟಿ, ಗಿರೀಶ್ ಹೆಗ್ಡೆ, ಹುಲುಗಪ್ಪ, ಆದಿಶ, ಲಕ್ಷ್ಮೀನಾರಾಯಣ, ಶಿವರಾಜ್, ಸುನಿಲ್ ಶೆಟ್ಟಿ, ಪ್ರಕಾಶ್ ಎಂ., ಮುತ್ತಪ್ಪ, ರವಿಕಾಂತ್ ಶೆಟ್ಟಿ ಉಪಸ್ಥಿತರಿದ್ದರು. ಎಸ್.ಬಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಂತರದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.