ಸಿಸಿ ಕ್ಯಾಮೆರಾ ಕಂಬಕ್ಕೆ ಲಾರಿ ಢಿಕ್ಕಿ: ಅಪಾರ ನಷ್ಟ
Update: 2023-12-06 20:04 IST
ಬ್ರಹ್ಮಾವರ, ಡಿ.6: ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಡಿವೈಡರ್ ಮಧ್ಯೆ ಅಳವಡಿಸಿರುವ ಸಿಸಿ ಕ್ಯಾಮೆರಾ ಕಂಬ ಸಹಿತ ಜಖಂಗೊಂಡು ಸಾವಿರಾರು ರೂ. ನಷ್ಟ ಉಂಟಾಗಿರುವ ಘಟನೆ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಡಿ.2ರಂದು ಸಂಜೆ ವೇಳೆ ನಡೆದಿದೆ.
ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಗೂಡ್ಸ್ ಕ್ಯಾರಿಯರ್ ಲಾರಿ ಎದುರಿನ ವಾಹನವನ್ನು ತಪ್ಪಿಸುವ ಭರದಲ್ಲಿ ಡಿವೈಡರ್ ಮೇಲೆ ಅಳವಡಿಸಿದ ಸಿಸಿ ಕ್ಯಾಮರದ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೇ ಕುಂದಾಪುರ ಕಡೆಗೆ ಪರಾರಿಯಾಗಿದ್ದಾನೆ. ಅಪಘಾತದಿಂದ ಸಿ.ಸಿ ಕ್ಯಾಮರದ ಕಂಬ ಹಾಗೂ ಸಿ.ಸಿ ಕ್ಯಾಮರಗಳು ಜಖಂ ಗೊಂಡು 58,000ರೂ. ಹಣ ನಷ್ಟವುಂಟಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.